ಮರವಂತೆ ಬೀಚ್ ಬಳಿ ತಿಮಿಂಗಿಲ ಮೃತದೇಹ ಪತ್ತೆ…..
ಕುಂದಾಪುರದ ಮರವಂತೆ ಬೀಚ್ ಬಳಿ ಸತ್ತ ತಿಮಿಂಗಿಲವೊಂದು ಹೆದ್ದಾರಿ ಬದಿಯ ತ್ರಾಸಿ -ಮರವಂತೆ ಕಡಲ ತೀರದಲ್ಲಿ ಪತ್ತೆಯಾಗಿದೆ.
ಬುಧವಾರ ಬೆಳಗ್ಗಿನಿಂದಲೇ ತಿಮಿಂಗಿಲ ಕೊಳೆತು ನಾರುತ್ತಿದ್ದರೂ ಇದುವರೆಗೆ ಸಂಬಂಧಪಟ್ಟ ಡಾಲ್ಫಿನ್ ಪ್ರವಾಸೋದ್ಯಮ ಇಲಾಖೆ ಅಥವಾ ಮೀನುಗಾರಿಕಾ ಇಲಾಖೆಯವರು ಈ ಬಗ್ಗೆ ಕ್ರಮಕೈಗೊಳ್ಳದಿರುವುದ ಹೆದ್ದಾರಿ ಪ್ರಯಾಣಿಕರು ಮತ್ತು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳವಾರ ತಡರಾತ್ರಿ ಸುಮಾರು 500 ಕೆಜಿ ತೂಕದ ತಿಮಿಂಗಿಲದ ಮೃತದೇಹವೊಂದು ಮರವಂತೆ ಬೀಚ ಬಳಿ ತೇಲಿ ಬಂದಿದೆ. ಬೀಚ್ ಬಳಿಯೆ ಹೆದ್ದಾರಿ ಇರುವುದರಿಂದ ಪ್ರಯಾಣಿಕರೆಲ್ಲರೂ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ.
ಕಡಲ ತೀರದ ವಿಕ್ಷಣೆಗೆ ಬಂದವರು ಮತ್ತು ಪ್ರಯಾಣಿಕರು ಸಂಬಂಧಿಸಿದ ಇಲಾಖೆಗೆ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
A dead whale was found near the Maravante beach in Kundapur on the Thrasi-Maravante beach along the highway.