ವೀಲ್ ಚೇರ್ ನಲ್ಲೇ ಪುಡ್ ಡಿಲೆವರಿ ಮಾಡುವ ದಿವ್ಯಾಂಗ ವ್ಯಕ್ತಿ – ವಿಡಿಯೋ ವೈರಲ್
ಓಡಾಡಲು ಸಾಧ್ಯವಾಗದ ದಿವ್ಯಾಂಗ ವ್ಯಕ್ತಿಯೊಬ್ಬ ವೀಲ್ ಚೇರ್ ಬಳಸಿ ಜೊಮ್ಯಾಟೋ ಪುಡ್ ಡೆಲವರಿ ಮಾಡುತ್ತಿರುವ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನ ಗ್ರೂಮಿಂಗ್ ಬುಲ್ಸ್ ಎನ್ನುವ ಸೋಶಿಯಲ್ ಮೀಡಿಯಾ ಪೇಜ್ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದೆ. ಇದು ಸ್ಪೂರ್ತಿಗೆ ಉದಾಹರಣೆ ಎಂದು ಪೋಸ್ಟ್ ಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋವನ್ನ 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ವೀಲ್ ಚೇರ್ ಗೆ ಮೋಟಾರ್ ಅಳವಡಿಸಲಾಗಿದ್ದು ಇದರಿಂದ ಅವರ ಡಿಲೆವರಿ ಓಡಾಟ ಸ್ವಲ್ಪ ಸುಲಭವಾಗಲಿದೆ. ಕೆಲವು ಬಳಕೆದಾರರು ಇವರಿಗೆ ಕೆಲಸ ಕೊಟ್ಟಿದ್ದಕ್ಕಾಗಿ ಜೊಮ್ಯಾಟೋ ಕಂಪನಿಯ ಕೆಲಸವನ್ನ ಶ್ಲಾಘಿಸಿದ್ದಾರೆ.
ಟೈಮ್ಸ್ ನೌ ಪ್ರಕಾರ್ ಈ ವ್ಯಕ್ತಿಯ ಹೆಸರು ಮುರುಗನ್ 6 ವರ್ಷಗಳಿಂದ ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಅಫಘಾತವಾಗಿದ್ದು ಪಾರ್ಶ್ವ ವಾಯುವಿಗೆ ಒಳಗಾಗಿದ್ದಾರೆ. ಇಷ್ಟೆಲ್ಲ ಕಹಿ ಘಟನೆಗಳ ನಡುವೆ ಅವರು ಭರವಸೆ ಕಳೆದುಕೊಂಡಿಲ್ಲ.