ರಾಯಚೂರು: 17 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ನಾಯಿ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಬಿಚ್ಚಾಲಿ (Bichali) ಎಂಬಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ಶುದ್ಧೀಕರಣ ಘಟಕದಿಂದ ಜಿಲ್ಲೆಯ ಒಟ್ಟು 17 ಗ್ರಾಮಗಳಿಗೆ ನೀರನ್ನು ಪೂರೈಸಲಾಗುತ್ತಿತ್ತು. ಈಗ ನಾಯಿ ಸತ್ತ ಸುದ್ದಿ ಕೇಳಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ನಾಯಿ ಸತ್ತು ಬಿದ್ದಿದ್ದು, ನೀರು ಕುಡಿದ ಜನರಲ್ಲಿ ವಾಂತಿ ಭೇದಿ ಅನುಭವ ಉಂಟಾಗಿತ್ತು. ಹೀಗಾಗಿ ಆಕ್ರೋಶ ವ್ಯಕ್ತಪಡಿಸಿರುವ ಜನರು, ಟ್ಯಾಂಕರ್ ಶುದ್ಧೀಕರಿಸುವಂತೆ ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಸಾಕಷ್ಟು ಅನುದಾನವಿದ್ದರೂ ಈ ರೀತಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರುಆಗ್ರಹಿಸಿದ್ದಾರೆ.
8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ
ಸದಾ ನಗುಮುಖದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ರಶ್ಮಿಕಾ ಮಂದಣ್ಣ ಇದೀಗ ತೀವ್ರವಾಗಿ ಗರಂ ಆಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್, ನೆಗೆಟಿವ್ ಕಮೆಂಟ್...








