ಪುನೀತ್ ಮೇಲಿನ ಅಭಿಮಾನ ಶಾಶ್ವತ
ಜೇಮ್ಸ್ ಸಿನಿಮಾಗೆ ಭರ್ಜರಿ ಓಪನಿಂಗ್
ಅಪ್ಪು ಅವರನ್ನ ನೋಡಿ ಫ್ಯಾನ್ಸ್ ಭಾವುಕ
ಅಪ್ಪು ಎಂಟ್ರಿ ಸೀನ್ ಗೆ ಅಭಿಮಾನಿ ಕಣ್ಣೀರು
ಇಂದು ವಿಶ್ವದಾದ್ಯಂತ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಜೇಮ್ಸ್ ಸಿನಿಮಾ ರಿಲೀಸ್ ಆಗಿದೆ.
ಜೇಮ್ಸ್ ರಿಲೀಸ್ ಆದ ಎಲ್ಲಾ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಜೇಮ್ಸ್ ಸಿನಿಮಾವನ್ನು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಹಬ್ಬದಂತೆ ಸ್ವಾಗತ ಕೋರಿದ್ದಾರೆ.
ಥಿಯೇಟರ್ ಗಳ ಮುಂದೆ ಕುಳಿದು ಕುಪ್ಪಳಿಸುತ್ತಿದ್ದಾರೆ. ಆದ್ರೆ ಥಿಯೇಟರ್ ಒಳಗಡೆ ಸಿನಿಮಾ ನೋಡಿದ ಅಭಿಮಾನಿಗಳು ಭಾವಕರಾಗಿದ್ದಾರೆ.
ಜೇಮ್ಸ್ ಸಿನಿಮಾದಲ್ಲಿ ಅಪ್ಪು ಎಂಟ್ರಿ ಕಂಡು ಅನೇಕರು ಕಣ್ಣೀರು ಹಾಕುತ್ತಿದ್ದಾರೆ. ಸಿನಿಮಾ ನೋಡಿ ಭಾವಕರಾಗಿರುವ ಪುನೀತ್ ಅಭಿಮಾನಿಗಳು ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ಇತ್ತ ಕರ್ನಾಟಕದಾದ್ಯಂತ ಜೇಮ್ಸ್ ಸಿನಿಮಾ ಜಾತ್ರೆ ಶುರುವಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಜೇಮ್ಸ್ ಸಿನಿಮಾವನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುತ್ತಿದ್ದಾರೆ.
ಮೂಲೇ ಮೂಲೆಯಲ್ಲಿಯೂ ಅಪ್ಪು ಕಟೌಟ್ ಗಳು ರಾರಾಜಿಸುತ್ತಿವೆ. A fan of puneeth Rajkumar crying while watching james movie









