ಚಾಮರಾಜನಗರ : ಒಂದೆಡೆ ಈರುಳ್ಳಿಗೆ ರೋಗದ ಭೀತಿ, ಬೆಲೆಕುಸಿತ ದಿಂದ ಕಂಗಲಾದ ರೈತ, ಮತ್ತೊಂದು ಕಡೆ ದುಬಾರಿ ಕಾರ್ಮಿಕರ ಕೂಲಿ ಇದರಿಂದ ಬೇಸತ್ತ ರೈತ ಈರುಳ್ಳಿ ಉಳುಮೆಯನ್ನ ನಾಶ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಿಗೌಡನಹಳ್ಳಿಯಲ್ಲಿ ನಡೆದಿದೆ .
ತಮಿಳುನಾಡಿನಿಂದ ಉತ್ತಮ ಗುಣಮಟ್ಟದ ಭಿತ್ತನೆ ದೊರಕದೆ ಸ್ಥಳೀಯವಾಗಿ ದೊರಕುವ ಕಳಪೆ ಬೀಜವನ್ನೇ ಭಿತ್ತನೆ ಮಾಡಿದ ಪರಿಣಾಮ ಅಲ್ಲಲ್ಲಿ ಬೆಳೆಯು ಕೊಳೆಯುತ್ತಿವೆ. ಕ್ರಿಮಿನಾಶಕ ಸಿಂಪಡೆಯ ವೆಚ್ಚವನ್ನು ಭರಿಸಿದರೂ ಸಾಕಷ್ಟು ಇಳುವರಿ ದೊರಕದು ಎಂಬ ಕಾರಣದಿಂದ ಒಂದೆಡೇ ಬೆಳೆಗಳನ್ನು ಉಳುಮೆ ಮಾಡುತ್ತಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಲ್ಲಿಗೌಡನಹಳ್ಳಿ ಬಸವರಾಜು ಎಂಬುವವರು ಎರಡು ಎಕರೆ ಜಮೀನಿನಲ್ಲಿ ಒಂದು ಲಕ್ಷ ಖರ್ಚು ಮಾಡಿ ಈರುಳ್ಳಿ ಬೆಳೆದಿದರು ರೋಗ ಭೀತಿ ಹಿನ್ನೆಲೆಯಲ್ಲಿ ಉಳುಮೆ ಮಾಡಿರುವ ಈರುಳ್ಳಿಯನ್ನು ನಾಶ ಮಾಡಿ ತಮ್ಮ ನೋವು ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಮಳೆ ಚೆನ್ನಾಗಿ ಬಿದ್ದಿದ್ದರಿಂದ ಬಹುತೇಕ ಗ್ರಾಮಾಂತರ ಪ್ರದೇಶಗಳಲ್ಲಿ ಸಣ್ಣಈರುಳ್ಳಿ ಭಿತ್ತನೆ ಮಾಡಲಾಗಿತ್ತು. ಹೆಚ್ಚಿನವರು ಅರಿಷಿಣ ಬೆಳೆಯ ಜತೆಗೆ ಮಿಶ್ರಬೆಳೆಯಾಗಿಯೂ ಭಿತ್ತನೆ ಮಾಡಿದ್ದರು. ಪ್ರಾರಂಭದಲ್ಲಿ ಚೆನ್ನಾಗಿ ಬೆಳೆಯುತ್ತಿದ್ದ ಈರುಳ್ಳಿ ಕಾಡಂಚಿನ ಹಂಗಳ, ಕಲ್ಲಿಗೌಡನಹಳ್ಳಿ, ಗೋಪಾಲಪುರ, ಬೇರಂಬಾಡಿ, ಚನ್ನಮಲ್ಲಿಪುರ, ದೇಶೀಪುರ, ಆಲತ್ತೂರು ಮಂಚಹಳ್ಳಿ ಮುಂತಾದ ಗ್ರಾಮಗಳ ಬಹುತೇಕ ನೀರಾವರಿ ಜಮೀನುಗಳಲ್ಲಿ ಬಿಳುಚಿಕೊಂಡು ಕೊಳೆಯಲಾರಂಭಿಸಿದೆ.
ಈರುಳ್ಳಿಗೆ ಟ್ವಿಂಸ್ವ ರೋಗ ಕಾಣಿಸಿಕೊಂಡಿದು ರೋಗಬಾಧೆ ನಿಯಂತ್ರಣ ಮೀರಿ ಗಿಡಗಳು ಕೊಳೆಯುತ್ತಿವೆ ದಳ್ಳಾಳಿಗಳು ಕಳಪೆ ಭಿತ್ತನೆ ಮಾರಾಟ ಮಾಡಿದ್ದದಿಂದ ಸರಿಯಾಗಿ ಗಿಡಗಳು ಬೆಳೆಯುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ .








