ಉಕ್ರೇನ್ನ ಗಡಿಯಲ್ಲಿದ್ದ ರಷ್ಯಾದ ತೈಲ ಡೀಪೋದಲ್ಲಿ ಕಾಣಿಸಿಕೊಂಡ ಬೆಂಕಿ
ರಷ್ಯಾ: ರಷ್ಯಾದ ತೈಲ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ ಎಂದು ತುರ್ತು ಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ನ ಗಡಿಯಲ್ಲಿದ್ದ ಬ್ರ್ಯಾಂಕ್ಸ್ ನಗರದಲ್ಲಿನ ತೈಲ ಸಂಗ್ರಹಣೆಯಲ್ಲಿ ಸೋಮವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆ ಎಲ್ಲೆಡೆ ಪಸರಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗುತ್ತಿದೆ. ಉಕ್ರೇನ್ ಗಡಿಯಲ್ಲಿರುವ ಬ್ರಿಯಾನ್ಸ್ಕ್ ಪ್ರದೇಶದಲ್ಲಿದ್ದು, ಮಾಸ್ಕೋದಿಂದ ನೈಋತ್ಯಕ್ಕೆ 380 ಕಿಮೀ ದೂರದಲ್ಲಿದೆ.
ತೈಲ ಘಟಕದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ನೌಕರರಿಗೆ ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ವರದಿಯಾಗಿದೆ.
ಏಪ್ರಿಲ್ 22 ರಂದು, ರಷ್ಯಾದ ವೈಮಾನಿಕ ದಾಳಿಯು ಉಕ್ರೇನ್ನ ಖಾರ್ಕಿವ್ ಪ್ರದೇಶದಲ್ಲಿನ ಚುಗೀವ್ನ ತೈಲ ಡಿಪೋವನ್ನು ನಾಶಪಡಿಸಿತು. ಘಟನೆ ನಡೆದ ಕೆಲವೇ ದಿನಗಳಲ್ಲಿ ರಷ್ಯಾದ ತೈಲ ಡಿಪೋ ಉಡೀಸ್ ಆಗಿದೆ. ಏಪ್ರಿಲ್ ಆರಂಭದಲ್ಲಿ, ಉಕ್ರೇನಿಯನ್ ಹೆಲಿಕಾಪ್ಟರ್ಗಳು ರಷ್ಯಾದ ಬೆಲ್ಗೊರೊಡ್ನಲ್ಲಿರುವ ರೋಸ್ನೆಫ್ಟ್ ಇಂಧನ ಡಿಪೋ ಮೇಲೆ ದಾಳಿ ಮಾಡಿದ್ದವು.