ಪಾಕಿಸ್ತಾನದಲ್ಲಿ 1,300 ವರ್ಷಗಳ ಹಿಂದೆ ನಿರ್ಮಿಸಲಾದ ಹಿಂದೂ ದೇವಾಲಯ ಪತ್ತೆ Hindu temple discovered Pakistan
ಪೇಶಾವರ, ನವೆಂಬರ್21: 1,300 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾದ ಹಿಂದೂ ದೇವಾಲಯವನ್ನು ಪಾಕಿಸ್ತಾನ ಮತ್ತು ಇಟಾಲಿಯನ್ ಪುರಾತತ್ವ ತಜ್ಞರು ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪರ್ವತವೊಂದರಲ್ಲಿ ಪತ್ತೆ ಮಾಡಿದ್ದಾರೆ. Hindu temple discovered Pakistan
ಬ್ಯಾರಿಕೋಟ್ ಘುಂಡೈನಲ್ಲಿ ಉತ್ಖನನ ನಡೆಸಿದಾಗ ಈ ಆವಿಷ್ಕಾರ ಮಾಡಲಾಗಿದೆ.
ಗುರುವಾರ ಆವಿಷ್ಕಾರವನ್ನು ಪ್ರಕಟಿಸಿದ ಖೈಬರ್ ಪಖ್ತುನ್ಖ್ವಾ ಪುರಾತತ್ವ ವಿಭಾಗದ ಫಝಲ್ ಖಲಿಕ್ ಅವರು ಪತ್ತೆ ಮಾಡಿದ ದೇವಾಲಯವು ವಿಷ್ಣುವಿನದ್ದಾಗಿದೆ ಎಂದು ಹೇಳಿದರು.
ಇದನ್ನು ಹಿಂದೂ ಶಾಹಿ ಅವಧಿಯಲ್ಲಿ 1,300 ವರ್ಷಗಳ ಹಿಂದೆ ಹಿಂದೂಗಳು ನಿರ್ಮಿಸಿದ್ದಾರೆ ಎಂದು ಅವರು ಹೇಳಿದರು.
ಹಿಂದೂ ಶಾಹಿಸ್ ಅಥವಾ ಕಾಬೂಲ್ ಶಾಹಿಸ್ (ಕ್ರಿ.ಶ. 850 1026) ಎಂಬುದು ಹಿಂದೂ ರಾಜವಂಶವಾಗಿದ್ದು, ಇದು ಕಾಬೂಲ್ ಕಣಿವೆ (ಪೂರ್ವ ಅಫ್ಘಾನಿಸ್ತಾನ), ಗಾಂಧಾರ (ಆಧುನಿಕ-ದಿನದ ಪಾಕಿಸ್ತಾನ) ಮತ್ತು ಆಧುನಿಕ ಭಾರತದ ವಾಯವ್ಯ ಭಾಗ ಇದರ ವ್ಯಾಪ್ತಿಯಲ್ಲಿತ್ತು ಎಂದು ಪುರಾತತ್ತ್ವಜ್ಞರು ಹೇಳಿದ್ದಾರೆ.
ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ಗೆ ಹತ್ತು ವರ್ಷಗಳ ಜೈಲು ಶಿಕ್ಷೆ
ದೇವಾಲಯದ ಸ್ಥಳದ ಬಳಿ ತಜ್ಞರು ಕಲ್ಯಾಣಿಯನ್ನು ಕಂಡುಹಿಡಿದಿದ್ದು, ಇದನ್ನು ಪೂಜೆಯ ಮೊದಲು ಸ್ನಾನ ಮಾಡಲು ಹಿಂದೂಗಳು ಬಳಸುತ್ತಿದ್ದರು.
ಸ್ವಾತ್ ಜಿಲ್ಲೆಯು ಸಾವಿರ ವರ್ಷಗಳಷ್ಟು ಹಳೆಯದಾದ ಪುರಾತತ್ವ ಸ್ಥಳಗಳಿಗೆ ನೆಲೆಯಾಗಿದೆ ಮತ್ತು ಹಿಂದೂ ಶಾಹಿ ಕಾಲದ ಕುರುಹುಗಳು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಕಂಡುಬಂದಿವೆ ಎಂದು ಖಲೀಕ್ ಹೇಳಿದರು.
ಸ್ವಾತ್ ಜಿಲ್ಲೆಯಲ್ಲಿ ಪತ್ತೆಯಾದ ಗಾಂಧಾರ ನಾಗರಿಕತೆಯ ಮೊದಲ ದೇವಾಲಯ ಇದಾಗಿದೆ ಎಂದು ಇಟಾಲಿಯನ್ ಪುರಾತತ್ವ ಕಾರ್ಯಾಚರಣೆಯ ಮುಖ್ಯಸ್ಥ ಡಾ.ಲುಕಾ ಹೇಳಿದರು.
ನೈಸರ್ಗಿಕ ಸೌಂದರ್ಯ, ಧಾರ್ಮಿಕ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ ಮತ್ತು ಪುರಾತತ್ತ್ವ ಶಾಸ್ತ್ರದ ತಾಣಗಳಂತಹ ಎಲ್ಲಾ ರೀತಿಯ ಪ್ರವಾಸೋದ್ಯಮಗಳಿಗೆ ನೆಲೆಯಾಗಿರುವ ಪಾಕಿಸ್ತಾನದ ಅಗ್ರ 20 ತಾಣಗಳಲ್ಲಿ ಸ್ವಾತ್ ಜಿಲ್ಲೆ ಸೇರಿದೆ.
ಬೌದ್ಧಧರ್ಮದ ಹಲವಾರು ಪೂಜಾ ಸ್ಥಳಗಳು ಸ್ವಾತ್ ಜಿಲ್ಲೆಯಲ್ಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಸೂರ್ಯನ ಬೆಳಕಿನ 7 ಸೂಪರ್ ಸೀಕ್ರೆಟ್ ಆರೋಗ್ಯ ಪ್ರಯೋಜನಗಳು https://t.co/vNF9KldJfl
— Saaksha TV (@SaakshaTv) November 20, 2020
ಪಾಕ್ ಭಯೋತ್ಪಾದಕ ಲಾಂಚ್ಪ್ಯಾಡ್ಗಳ ಮೇಲೆ ಭಾರತದ ಪಿನ್ಪಾಯಿಂಟ್ ಸ್ಟ್ರೈಕ್https://t.co/5w1CUgca2A
— Saaksha TV (@SaakshaTv) November 20, 2020