ಬೆಂಗಳೂರು: ದರ ಏರಿಕೆ ನಡುವೆಯೂ ಮದ್ಯ ಮಾರಾಟ ಭಾರೀ ಹೆಚ್ಚಳವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಹಣ ಹರಿದು ಬರುತ್ತಿದೆ.
ಬಿಯರ್ (Beer) ಜೊತೆಗೆ ಇತರೆ ಮಾದರಿಯ ಮದ್ಯ ಮಾರಾಟದ ಪ್ರಮಾಣ 0.43ರಷ್ಟು ಹೆಚ್ಚಳವಾಗಿದೆ. ಈ ವರ್ಷದ 8 ತಿಂಗಳು (ಏಪ್ರಿಲ್ನಿಂದ ನವೆಂಬರ್ ವರೆಗೆ) ಬರೋಬ್ಬರಿ 22,500 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2,500 ಕೋಟಿ ರೂ. ಹೆಚ್ಚುವರಿ ಆದಾಯ ಬಂದಿದೆ. ಗ್ಯಾರಂಟಿ ಸರಿದೂಗಿಸಲು ಒದ್ದಾಡುತ್ತಿದ್ದ ಸರ್ಕಾರ ಈಗ ಮತ್ತೆ ಸೆಟೆದು ನಿಲ್ಲುವಂತಾಗಿದೆ.
ಕಳೆದ ವರ್ಷ ದಿನಕ್ಕೆ 80 ಕೋಟಿ ರೂ. ಸರಾಸರಿ ಆದಾಯ ಬರುತ್ತಿತ್ತು. ಸದ್ಯ ದಿನಕ್ಕೆ 90 ಕೋಟಿ ರೂ. ಆದಾಯ ಬರುತ್ತಿದೆ. ನವೆಂಬರ್ ನಲ್ಲಿ ಸರಾಸರಿ ಆದಾಯ ದಿನಕ್ಕೆ 95 ಸಾವಿರ ಕೋಟಿಗೆ ಏರಿದೆ.