ಸೂಪರ್ ಸ್ಟಾರ್ ಉಪೇಂದ್ರ (Upendra) ನಟಿಸಿ, ನಿರ್ದೇಶಿಸಿರುವ UI ಸಿನಿಮಾ ಇಂದು ಭರ್ಜರಿಯಾಗಿ ತೆರೆ ಕಂಡಿದೆ.
ಉಪ್ಪಿ ಎಂಟ್ರಿ ನೋಡಿ ಫ್ಯಾನ್ಸ್ ಅಬ್ಬರ, ಸೆಲೆಬ್ರೇಶನ್ ಎರಡು ಜೋರಾಗಿದೆ. ಅಭಿಮಾನಿಗಳು ಉಪೇಂದ್ರ ಮತ್ತು ಶಿವಣ್ಣ ಫೋಟೋ ಇಟ್ಟು ವಿಶೇಷ ಪೂಜೆ ಮಾಡಿದ್ದಾರೆ.
ಸಂತೋಷ್ ಥಿಯೇಟರ್ ಮುಂದೆ ಅಭಿಮಾನಿಯೊಬ್ಬರು ಶಿವಣ್ಣ (Shivarajkumar) ಸರ್ಜರಿ ನಂತರ ಆರೋಗ್ಯವಾಗಿ ಭಾರತಕ್ಕೆ ಹಿಂದಿರುಗಲಿ ಎಂದು ಪೂಜೆ ಮಾಡಿಸಿದ್ದಾರೆ. ಚಿತ್ರಮಂದಿರದ ಮುಂದೆ ಶಿವಣ್ಣ, ಉಪೇಂದ್ರ ಅವರ ಫೋಟೋಗಳನ್ನಿಟ್ಟು ಹೋಮ ಮಾಡಿದ್ದಾರೆ. ಮೂವರು ಪೂಜಾರಿಗಳು ಹೋಮ ಕುಂಡಕ್ಕೆ ತುಪ್ಪ ಸುರಿದು ಮಂತ್ರ ಪಠಿಸಿ ಪೂಜೆ ಮಾಡಿದ್ದಾರೆ.
UI ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ತಲೆಗೆ ಉಪೇಂದ್ರ ಹುಳ ಬಿಟ್ಟಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ‘ಯುಐ’ ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಪ್ರೇಕ್ಷಕರಿಂದ ರೆಸ್ಪಾನ್ಸ್ ಬಂದಿದೆ. ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಎಬ ಸಂದೇಶ ಇದೆ ಎಂದು ಅಭಿಮಾನಿಗಳು ಹೇಳಿದ್ದಾರೆ.








