ಏರ್ ಇಂಡಿಯಾ ಏರ್ ಲೈನ್ಸ್ ನಡೆದು ಬಂದ ದಾರಿಯ ಕಿರು ಪರಿಚಯ
ಜೆಆರ್‌ಡಿ ಟಾಟಾ ಅವರು 1932ರಲ್ಲಿ ಟಾಟಾ ಏರ್ ಲೈನ್ಸ್ ಪ್ರಾರಂಭಿಸಿದರು.
ಕರಾಚಿಯಿಂದ ಮುಂಬೈಯ ಮೊದಲ ಟಾಟಾ ಏರ್ ಲೈನ್ಸ್ ಪಯಣಕ್ಕೆ ಟಾಟಾ ಪೈಲಟ್ ಆಗಿದ್ದರು.
ಸ್ವಾತಂತ್ರ್ಯ ದ ಬಳಿಕ, ವಾಯುಯಾನ ವಲಯವನ್ನು ರಾಷ್ಟ್ರೀಕರಣಗೊಳಿಸಲಾಯಿತು ಮತ್ತು ಸರ್ಕಾರವು ಟಾಟಾ ಏರ್ ಲೈನ್ಸ್ ಷೇರುಗಳಲ್ಲಿ ಶೇಕಡಾ 49 ರಷ್ಟನ್ನು ಖರೀದಿಸಿತು.

ನಂತರ ಟಾಟಾ ಏರ್ ಲೈನ್ಸ್ ಸಾರ್ವಜನಿಕ ಸೀಮಿತ ಕಂಪನಿಯಾಯಿತು ಮತ್ತು ಜುಲೈ 29, 1946 ರಂದು ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು.
1948ರಲ್ಲಿ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ (ಎಐಟಿಎ) ಸ್ಥಾಪಿಸಲಾಯಿತು
1953ರಲ್ಲಿ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರು ಸರ್ಕಾರ ಏರ್ ಕಾರ್ಪೊರೇಷನ್ ಕಾಯ್ದೆಯನ್ನು ಅಂಗೀಕರಿಸಿತು ಮತ್ತು ಕಂಪನಿಯ ಸ್ಥಾಪಕ ಜೆಆರ್ ಡಿ ಟಾಟಾ ಅವರಿಂದ ಮಾಲೀಕತ್ವದ ಹಕ್ಕುಗಳನ್ನು ಖರೀದಿಸಿತು.
ಟಾಟಾ ಅವರು ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆದರು.
ನಂತರ ಈ ಕಂಪನಿಯನ್ನು ಏರ್ ಇಂಡಿಯಾ ಇಂಟರ್ ನ್ಯಾಷನಲ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು.
1977ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಟಾಟಾ ಅವರನ್ನು ಸಂಸ್ಥೆಯ ಚೇರ್ಮನ್ ಸ್ಥಾನದಿಂದ ಕೆಳಗಿಳಿಸಿದರು.
1990ರ ಸಮಯದಲ್ಲಿ ಏರ್ ಇಂಡಿಯಾ ಸಂಸ್ಥೆಯು ಖಾಸಗಿ ವಿಮಾನಗಳ ಪ್ರವೇಶದಿಂದ ಮಂಕಾಯಿತು.
2000ರಲ್ಲಿ ಯಾವುದೇ ಹೊಸ ವಿಮಾನಗಳಿಲ್ಲದೇ ನಷ್ಟದತ್ತ ಮುಖ ಮಾಡಿತು .
2007ರಲ್ಲಿ ಸರ್ಕಾರಿ ಸ್ವಾಮ್ಯದ ದೇಶೀಯ ವಿಮಾನಯಾನ ಸಂಸ್ಥೆ ಇಂಡಿಯನ್ ಏರ್ ಲೈನ್ಸ್ ಜೊತೆಗೆ ಏರ್ ಇಂಡಿಯಾ ವಿಲೀನದಿಂದ ಸಂಸ್ಥೆಯು ಸಂಪೂರ್ಣ ನಷ್ಟದ ಸುಳಿಗೆ ಸಿಲುಕಿತು.
2017-18ರಲ್ಲಿ ಏರ್ ಇಂಡಿಯಾ ಸಂಸ್ಥೆ 5,799 ಕೋಟಿ ರೂ ನಷ್ಟ ಅನುಭವಿಸಿತು.
2019ರ ಮಾರ್ಚ್ 31ಕ್ಕೆ ಈ ಪ್ರಮಾಣ 60,074ಕೊಟಿರೂ ಗೆ ಏರಿಕೆ ಕಂಡಿತು.
ಡಿಸೆಂಬರ್ 2020 ರಲ್ಲಿ ಏರ್ ಇಂಡಿಯಾದ ವಿಭಜನೆಗೆ ಸರ್ಕಾರವು ಆಸಕ್ತಿಯ ಆಹ್ವಾನ ನೀಡಿತ್ತು.
ಏರ್ ಇಂಡಿಯಾ ಸಂಸ್ಥೆಯ ಖರೀದಿ ಸಂಬಂಧ ನಡೆಸಲಾದ ಬಿಡ್ ನಲ್ಲಿ ವಿವಿಧ ಸಂಸ್ಥೆಗಳು ಪಾಲ್ಗೊಂಡಿದ್ದವು.
ಕೊನೆಯ ಬಿಡ್ ಹಂತದಲ್ಲಿ ಟಾಟಾ ಗ್ರೂಪ್ ಮತ್ತು ಸ್ಪೈಸ್‌ಜೆಟ್ ಉಳಿದುಕೊಂಡಿದ್ದು, ಹಳೆಯ ಮಾಲೀಕನನ್ನೇ ಏರ್ ಇಂಡಿಯಾ ಮತ್ತೊಮ್ಮೆ ಸೇರಲಿದೆಯಾ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1444483053577965570?s=19
https://twitter.com/SaakshaTv/status/1444460267228864514?s=19
https://twitter.com/SaakshaTv/status/1444135690875326465?s=19
https://twitter.com/SaakshaTv/status/1444122158276521986?s=19
#Lifecircle #AirIndia #airlines








