ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪ್ರಿಯತಮೆ (Lover) ಭೇಟಿ ಮಾಡಲು ಹೋಗಿ, ಸುಲಿಗೆಗೆ ಒಳಗಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ (Koramangala Police Station) ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯತಮೆ ಹಾಗೂ ಗ್ಯಾಂಗ್ ನಿಂದ ಸುಲಿಗೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಶಿವ ಮತ್ತು ಮೋನಿಕಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಶಿವನಿಗೆ ಕರೆ ಮಾಡಿ ನನ್ನ ಸ್ನೇಹಿತರು ನಿನ್ನ ನೋಡಬೇಕು. ಹೀಗಾಗಿ ನೀನು ಎಲ್ಲ ಚಿನ್ನಾಭರಣ ಹಾಕಿಕೊಂಡು ಕಾರಿನಲ್ಲಿ ಬಾ ಎಂದು ಪ್ರಿಯತಮೆ ಹೇಳಿದ್ದಾಳೆ. ಈ ಮಾತು ನಂಬಿದ ಪ್ರೇಮಿ, ಅವಳು ಹೇಳಿದಂತೆ ತನ್ನಲ್ಲಿರುವ ಎಲ್ಲ ಬಂಗಾರ ಹಾಕಿಕೊಂಡು ಹೋಗಿದ್ದಾನೆ.
ಆಗ ಶಿವನನ್ನು ಮೋನಿಕಾ ಮತ್ತು ಗ್ಯಾಂಗ್ ಅಪಹರಿಸಿ, ಚಿನ್ನಾಭರಣ ದೋಚಿದ್ದಲ್ಲದೇ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನಂತರ ಪ್ರಿಯತಮೆ ಶಿವನಿಗೆ 5 ಲಕ್ಷ ರೂ. ಕೊಡೋಕೆ ಒಪ್ಪಿಸಿದ್ದಳು. ಎಟಿಎಂ ಕಾರ್ಡ್ ಬೆಂಗಳೂರಿನ ಮೆಜೆಸ್ಟಿಕ್ ಅಡ್ರೆಸ್‌ಗೆ ಕೋರಿಯರ್ ಮಾಡಿಸಿಕೊಡು ಕೋರಮಂಗಲಕ್ಕೆ ಹಣ ಡ್ರಾ ಮಾಡಿಕೊಳ್ಳಲು ಬಂದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.








