ಬೆಂಗಳೂರು:ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ (Darshan) ಜೈಲಿನಲ್ಲಿದ್ದುಕೊಂಡೇ ರೌಡಿಶೀಟರ್ ಮೊಬೈಲ್ ನಿಂದ ವಿಡಿಯೋ ಕಾಲ್ ಮಾಡಿರುವುದು ಹಾಗೂ ಕೈಯಲ್ಲಿ ಕಾಫಿ ಕಪ್ ಹಿಡಿದು, ಸಿಗರೇಟ್ ಹಿಡಿದುಕೊಂಡಿರುವ ಫೋಟೋ ಕೂಡ ವೈರಲ್ ಆಗಿತ್ತು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಮುಜುಗರಕ್ಕೆ ಒಳಗಾದ ಸರ್ಕಾರ ತನಿಖೆಗೆ ಆದೇಶಿಸಿದೆ. ಹೀಗಾಗಿ ಎಫ್ ಐಆರ್ ದಾಖಲಿಸಿಕೊಂಡಿದ್ದಪೊಲೀಸರು ತನಿಖೆಗೆ (Police Investigation) ಮುಂದಾಗಿದ್ದಾರೆ.
ನಟ ದರ್ಶನ್ ರ ವಿಚಾರಣೆ ಕೂಡ ನಡೆಸಲಾಗಿದೆ. ಆದರೆ, ತನಿಖಾಧಿಕಾರಿಗಳ ಮುಂದೆ ದರ್ಶನ್ ಜಾಣ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ. ನನ್ನ ಕೋಣೆಗೆ ಬಂದಿದ್ದು ಯಾರು ಎಂಬುವುದು ನನಗೆ ಗೊತ್ತಿಲ್ಲ. ನಾನು ಮಾತನಾಡಿದ ವ್ಯಕ್ತಿಯೂ ನನಗೆ ಗೊತ್ತಿಲ್ಲ. ಕರೆ ಮಾಡಿದವನು ಯಾರು ಎಂಬುದೇ ಗೊತ್ತಿಲ್ಲ. ವೀಡಿಯೋ ಕಾಲ್ (Video Call) ಮಾಡಿಕೊಂಡು ಬಂದು, ದರ್ಶನ್ ಸರ್ ಇದ್ದಾರೆ ಅಂತ ಹೇಳ್ಕೊಂಡು ಬಂದ. ನನ್ನ ಕಡೆ ಮೊಬೈಲ್ ತಿರುಗಿಸಿದ. ಆದ್ದರಿಂದ ನಾನು ವಿಶ್ ಮಾಡಿದೆ ಅಷ್ಟೇ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ನಾನು ಬೈಯೋದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಿದೆ ಹೊರತು, ನಾನೇ ಬೇಕೆಂದು ವೀಡಿಯೋ ಕಾಲ್ ಮಾಡಿಲ್ಲ, ಅಂತ ದರ್ಶನ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ದರ್ಶನ್, ಊಟ ಆಯ್ತಾ ಚಿನ್ನ, ಆರಾಮಾಗಿದ್ದೀನಿ ಅಂತ ಹೇಳಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.