ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ
ಒಂದೇ ಭಾರಿಗೆ ಒಂಬತ್ತು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಮೊರೊಕ್ಕೊ ದೇಶದಲ್ಲಿ ನಡೆದಿದೆ..ಮಾಲಿ ದೇಶದ ಹಲೀಮಾ ಸಿಸ್ಸೆ ಎನ್ನುವ ಮಹಿಳೆ ಈಗ ಮಹಾತಾಯಿಯಾಗಿ ಗುರುತಿಸಿಕೊಂಡಿದ್ದಾರೆ.. ಜನ್ಮ ಪಡೆದಿರುವ 9 ಮಕ್ಕಳಲ್ಲಿ ಎಲ್ಲ ಮಕ್ಕಳು ಆರೋಗ್ಯವಂತರಾಗಿರುವುದು ಇದೇ ಮೊದಲು ಎನ್ನಲಾಗಿದೆ.
25 ವರ್ಷದ ಹಲೀಮಾ ಸಿಸ್ಸೆ ಎನ್ನುವ ಮಹಿಳೆಗೆ ಸ್ಕ್ಯಾನಿಂಗ್ ಮಾಡಿಸದಿದಾಗ 7 ಮಕ್ಕಳಿಗೆ ಜನ್ಮ ನೀಡುವ ನಿರೀಕ್ಷೆಯನ್ನ ಹೊಂದಿದ್ದರು. ಡಿಲೆವರಿ ಹತ್ತಿರ ಬರುತ್ತಿದ್ದಂತೆ ಮಾಲಿಯ ಸರಕಾರ ಗರ್ಭಿಣಿಯನ್ನ ಮೊರಾಕ್ಕೋ ದೇಶದ ಖಾಸಗಿ ಕ್ಲೀನಿಕ್ ಗೆ ದಾಖಲಿಸಲಾಗಿತ್ತು. ಕಳೆದ ಮಂಗಳವಾರ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಕ್ಕಳು ಆರೋಗ್ಯವಂತರಾಗಿದ್ದಾರೆ ಎಂದು ಮಾಲಿಯ ಆರೋಗ್ಯ ಸಚಿವಾಲಯ ತಿಳಿಸಿದೆ.
9 ಆರೋಗ್ಯವಂತ ಮಕ್ಕಳಿಗೆ ಜನ್ಮನೀಡಿರುವುದು ಇದೇ ಮೊದಲಾಗಿದ್ದು ಗಿನ್ನಿಸ್ ರೆಕಾರ್ಡ್ ಸಾಧನೆಗೆ ಮಾಲಿಯ ಮಹಿಳೆ ಸೇರಲಿದ್ದಾರೆ. ಈ ಹಿಂದೆ ಅಮೇರಿಕಾದ ಮಹಿಳೆಯೊಬ್ಬರು 8 ಮಕ್ಕಳಿಗೆ ಜನ್ಮ ನೀಡಿದ್ದು ಈ ಹಿಂದಿನ ಸಾಧನೆಯಾಗಿತ್ತು.
ಮೊರಾಕ್ಕೋ ದೇಶದ ಖಾಸಗಿ ಆಸ್ಪತ್ರೆಯ ನಿರ್ದೇಶಕರು ಮಾತನಾಡಿ “ಸಿಸೇರಿಯನ್ ಮೂಲಕ ಮಕ್ಕಳನ್ನ ಹೊರತೆಗೆದಿದ್ದು 500 ರಿಂದ 1000 ಗ್ರಾಂ ವರೆಗೆ ತೂಕವನ್ನ ಹೊಂದಿದ್ದಾರೆ, ಮಕ್ಕಳನ್ನ ಸದ್ಯ ನಿಘಾ ಘಟಕದಲ್ಲಿ ಇಡಲಾಗಿದ್ದು ಆರೋಗ್ಯವಂತರಾಗಿದ್ದಾರೆ” ಎಂದು ತಿಳಿಸಿದರು








