ತಂದೆ ಹಣ ಕೊಡದಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ chamarajanagara saaksha tv
ಚಾಮರಾಜನಗರ : ಮನೆಯಲ್ಲಿ ಹಣ ಕೊಡದಿದಕ್ಕೆ ಯುವಕನೋರ್ವ ಕೈ, ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಳ್ಳೆಗಾಲದ ಪಾಳ್ಯ ಗ್ರಾಮದಲ್ಲಿ ನಡೆದಿದೆ.
29 ವರ್ಷದ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ.
ಸ್ನೇಹಿತರ ಬಳಿ ಪಡೆದ ಸಾಲ ತೀರಿಸಲು ಸಂತೋಷ್ ತಂದೆ ಸುರೇಶ್ ಬಳಿ 20 ಸಾವಿರ ಹಣ ಕೇಳಿದ್ದ.
ಆದ್ರೆ ಸುರೇಶ್ ಅವರು ಹಣ ನೀಡದ ಕಾರಣ ಸಂತೋಷ್ ಚಾಕುವಿನಲ್ಲಿ ಕೈ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ಧಾರೆ.
ಸದ್ಯ ಯುವಕ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.









