ಹಬ್ಬಕ್ಕೆಂದು ಊರಿಗೆ ಬಂದ ವ್ಯಕ್ತಿಯ ತೆಲೆ ಕತ್ತರಿಸಿದ ನಟ
ಚಿತ್ರದುರ್ಗ : ತನ್ನ ಮೇಲೆ ವಾಮಾಚವಾರ ಮಾಡಿಸಿದ್ದಾನೆಂದು ನಟನೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿ ರುಂಡ, ಮುಂಡ ಬೇರೆ ಮಾಡಿರುವ ಘಟನೆ ಹಿರಿಯೂರು ತಾಲೂಕಿನ ಶ್ರವಣಗೆರೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ರಮೇಶ್ (45) ಕೊಲೆಯಾದ ದುರ್ದೈವಿ. ಕೊಲೆ ಆರೋಪಿ ಶ್ರೀನಿವಾಸ್ (40) ನಟನಾಗಿದ್ದು ಸಂತ ಮತ್ತು ರಂಗೋಲಿ ಧಾರವಾಹಿಯಲ್ಲಿ ನಟಿಸಿದ್ದಾನೆಂದು ಹೇಳಲಾಗಿದೆ. ರಮೇಶ್ ತನ್ನ ಮೇಲೆ ವಾಮಾಚಾರ ಮಾಡಿಸಿದ್ದಾನೆ ಎಂದು ಶ್ರೀನಿವಾಸ್ ಕೊಲೆ ಮಾಡಿ ರುಂಡವನ್ನು ಹೊಲದಲ್ಲಿ ಹೂತಾಕಿ ತೆಲೆಮರಿಸಿಕೊಂಡಿದ್ದಾನೆ.
ನಡೆದಿದ್ದೇನು? ರಮೇಶ್ ತನ್ನ ಮೇಲೆ ವಾಮಾಚಾರ ಮಾಡಿಸಿದ್ದಾನೆಂದು ಶ್ರೀನಿವಾಸ್, ರಮೇಶ್ ನನ್ನು ಕೊಲೆ ಮಾಡಲು ವಂಚು ಹಾಕಿಕೊಂಡಿದ್ದ. ಈ ಸಮಯದಲ್ಲಿ ಬೆಂಗಳೂರಿನಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದ ರಮೇಶ ಯುಗಾದಿ ಹಬ್ಬಕ್ಕೆಂದು ಊರಿಗೆ ಬಂದದ್ದರು.
ಆದರೆ ರಮೇಶ್ ಮನೆಯಲ್ಲಿ ಹೆಂಡತಿ-ಮಕ್ಕಳು ಹಬ್ಬಕ್ಕೆಂದು ತವರಿಗೆ ಹೋಗಿದ್ದರು. ಇತ್ತ ಹೊಂಚು ಹಾಕಿದ್ದ ಶ್ರೀನಿವಾಸ್ ಮನೆಯಲ್ಲಿ ರಮೇಶ್ ಒಂಟಿಯಾಗಿರುವುದು ತಿಳಿದಿದೆ. ರಾತ್ರಿ ರಮೇಶ್ ಒಬ್ಬನೇ ಮಲಗಿದ್ದಾಗ ಶ್ರೀನಿವಾಸ್ ಚಾಕುವನಿಂದ ದಾಳಿ ಮಾಡಿದ್ದಾನೆ. ರಮೇಶ್ನನ್ನು ಶ್ರೀನಿವಾಸ್ ಬರ್ಬರವಾಗಿ ಕೊಲೆ ಮಾಡಿದ ಬಳಿಕ ಆತನ ದೇಹದಿಂದ ರುಂಡವನ್ನು ಬೇರ್ಪಡಿಸಿದ್ದಾನೆ. ನಂತರ ಆ ರುಂಡವನ್ನು ಹೊಲದಲ್ಲಿ ಹೂತಿಟ್ಟು ಪರಾರಿಯಾಗಿದ್ದಾನೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ರಾಘವೇಂದ್ರ, ಪಿಎಸ್ಐ ಪರುಶುರಾಮ ಎನ್. ಲಮಾಣಿ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.








