ಸಾಮಾನ್ಯವಾಗಿ ಜೆಸಿಬಿ (JCB) ಯನ್ನು ಮಣ್ಣು ಅಗೆಯಲು, ಯಾವುದಾದರೂ ಕಾಮಗಾರಿಗಳಲ್ಲಿ ಬಳಸಿಕೊಳ್ತಾರೆ. ಆದ್ರೆ ಇಲ್ಲೋಬ್ಬ ವ್ಯಕ್ತಿ ಜೆಸಿಬಿ (JCB) ಯಲ್ಲಿ ತನ್ನ ಬೆನ್ನು ಉಜ್ಜಿಕೊಳ್ಳುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ.
ಇದು ಅಚ್ಚರಿ ಎನಿಸಿದರೂ ನಂಬಲೇಬೇಕು. ಯಾಕೆಂದ್ರೆ ಜೆಸಿಬಿಯ ಬಕೆಟ್ ನಿಂದ ವ್ಯಕ್ತಿ ಒಬ್ಬ ತನ್ನ ಬೆನ್ನು ಉಜ್ಜಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕಾಮಗಾರಿ ನಡೆಯೋ ಪ್ರದೇಶದಲ್ಲಿ ವ್ಯಕ್ತಿ ಮೊದಲು ತನ್ನ ಟವಲ್ ನಿಂದ ಬೆನ್ನು ಉಜ್ಜಿಕೊಂಡಿದ್ದಾರೆ. ಆದರೆ ಅದರಿಂದ ಅವರಿಗೆ ತೃಪ್ತಿ ಸಿಕ್ಕಿಲ್ಲ ಅಂತ ಕಾಣುತ್ತೆ.
ಇದನ್ನೂ ಓದಿ : ವಿಡಿಯೋ ರೆಕಾರ್ಡ್ ಮಧ್ಯೆ ದೆವ್ವ : ವಿಡಿಯೋ ವೈರಲ್
ಹೀಗಾಗಿ ಜೆಸಿಬಿ ಬಳಿ ಹೋಗಿ ಅದರ ಬಕೆಟ್ ಮುಂದೆ ಬಾಗಿ ನಿಲ್ಲುತ್ತಾರೆ. ಈ ವೇಳೆ ಜೆಸಿಬಿ ಚಾಲಕ ಅದರ ಬಕೆಟ್ ನಿಂದ ವ್ಯಕ್ತಿಯ ಬೆನ್ನನ್ನು ಉಜ್ಜುತ್ತಾರೆ. ಇದರಿಂದ ವ್ಯಕ್ತಿಗೆ ಸಮಾಧಾನವಾದಂತೆ ತೋರುತ್ತಿದೆ.
https://www.facebook.com/watch/?v=257727322285477
ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. 41 ಸೆಕೆಂಡಿನ ವೀಡಿಯೋವನ್ನು ಅಬ್ದುಲ್ ನಝಾರ್ ಎಂಬವರು ತಮ್ಮ ಫೇಸ್ ಬುಕ್ ಖಾತೆಯಿಂದ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಪಾಪ..! ಆನೆ ಮೇಲಿಂದ ಬಿದ್ದ ಯೋಗ ಗುರು ರಾಮ್ ದೇವ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel