ತುಮಕೂರು: ಆನ್ ಲೈನ್ ಗೇಮ್ (Online Game)ಆಡಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಜಿಲ್ಲೆಯ (Tumkuru) ನಗರದ ಹೊರಪೇಟೆಯಲ್ಲಿ ಈ ಘಟನೆ ನಡೆದಿದೆ. ನೇಣಿಗೆ ಶರಣಾದ ಯುವಕನನ್ನು ಟಿ.ಎಸ್.ಭರತ್ (24) ಎಂದು ಗುರುತಿಸಲಾಗಿದೆ. ಯುವಕ ಇತ್ತೀಚೆಗೆ ಆನ್ ಲೈನ್ ಗೇಮ್ ನಲ್ಲಿ 20 ಸಾವಿರ ರೂ. ಹಣ ಕಳೆದುಕೊಂಡಿದ್ದ. ಈ ವಿಚಾರ ತಾಯಿಗೆ ಗೊತ್ತಾಗಿತ್ತು. ಹೀಗಾಗಿ ಆನ್ ಲೈನ್ ಗೇಮ್ ಆಡಬೇಡ ಎಂದು ಬುದ್ಧಿ ಹೇಳಿದ್ದರು. ಈ ವಿಚಾರವಾಗಿ ಕೋಪಗೊಂಡ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಈ ಕುರಿತು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








