ಟೀ ಕುಡಿಯುತ್ತ ಲೋಟವನ್ನೇ ನಂಗಿದ ವ್ಯಕ್ತಿ Saaksha tv
ಬಿಹಾರ: ವ್ಯಕ್ತಿಯೋರ್ವನನ್ನು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಗಾಜಿನ ಟೀ ಗ್ಲಾಸ್ ಪತ್ತೆಯಾಗಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
ವೈಶಾಲಿ ಜಿಲ್ಲೆಯ ಮಹುವಾದ ಎಂಬ 55 ವರ್ಷದ ವ್ಯಕ್ತಿ ಹೊಟ್ಟೆ ನೋವು ಮತ್ತು ಮಲಬದ್ಧತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಟ್ರಾಸೌಂಡ್ ಮತ್ತು ಎಕ್ಸ್ –ರೇ ಮಾಡಿದಾಗ ಕರುಳಿನಲ್ಲಿ ಒಂದು ವಸ್ತು ಕಂಡಿತು. ಆಮೇಲೆ ನೋಡಿದಾಗ ಅದು ಗಾಜಿನ ಟೀ ಗ್ಲಾಸ್ ಎಂದು ತಿಳಿದು ಖುದ್ದು ವೈದ್ಯರೇ ಅಚ್ಚರಿ ಪಟ್ಟಿದ್ದಾರೆ.
ಡಾ. ಮಖ್ದುಲುಲ್ ಹಕ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಗಾಜಿನ ಟೀ ಗ್ಲಾಸ್ ನ್ನು ತೆಗೆಯಲಾಗಿದೆ. ಆದರೆ ಅದು ಹೊಟ್ಟೆಯೊಳಕ್ಕೆ ಹೋದದ್ದು ಹೇಗೆ ಎಂಬುವುದು ಮಾತ್ರ ನಿಗೂಢವಾಗಿದೆ. ಆ ವ್ಯಕ್ತಿಯನ್ನು ಕೇಳಿದಾಗ ಆತ ತಾನು ಟೀ ಕುಡಿಯುವಾಗ ಅದರ ಜೊತೆ ಗಾಜಿನ ಟಂಬ್ಲರ್ ಕೂಡ ನುಂಗಿದೆ ಎಂದಿದ್ದಾನೆ. ಆದರೆ ಇದನ್ನು ಸಾಧ್ಯವಿಲ್ಲ ಎಂದಿದ್ದಾರೆ ವೈದ್ಯರು. ಇದನ್ನು ಸುಲಭದಲ್ಲಿ ಒಪ್ಪಿಕೊಳ್ಳುವುದು ಕಷ್ಟ. ಯಾವ ವ್ಯಕ್ತಿ ಈ ರೀತಿ ಮಾಡಲು ಸಾಧ್ಯ ಎಂದು ವೈದ್ಯರು ಪ್ರಶ್ನಿಸುತ್ತಿದ್ದಾರೆ.








