ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದಕ್ಕೆ ಸಾವನ್ನೂ ಲೆಕ್ಕಿಸದೆ ಹಲವಾರು ಸ್ಟಂಟ್ ಉಪಯೋಗಿಸುತ್ತಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ಹಾವಿಗೆ ಕಿಸ್ ಮಾಡಲು ಹೋಗಿ, ಹಾವಿನಿಂದ ಕಚ್ಚಿಸಿಕೊಂಡಿರುವ ಘಟನೆ ನಡೆದಿದೆ.
ಜೀವಂತ ಹಾವಿಗೆ ಮುತ್ತಿಡಲು ಹೋಗಿ ಆತ ಕಚ್ಚಿಸಿಕೊಂಡಿರುವ ಘಟನೆ ನಡೆದಿದೆ. NeverteIImeodd ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಭಂಡ ಧೈರ್ಯದ ವ್ಯಕ್ತಿಯೊಬ್ಬ ಬರಿಗೈಲಿ ಜೀವಂತ ಹಾವನ್ನು ಹಿಡಿದುಕೊಂಡು ಅದಕ್ಕೆ ಮುತ್ತಿಡಲು ಯತ್ನಿಸಿದ್ದಾನೆ. ಹೀಗೆ ಮುತ್ತಿಡಲು ಹೋದಾಗ ಒಮ್ಮೆಲೆ ಎಗರಿದ ಹಾವು ಆತನ ಕೆಳ ತುಟಿಯನ್ನು ಕಚ್ಚಿ ಎಳೆದಿದೆ.
ಡಿಸೆಂಬರ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.








