ಮದುವೆಯಾಗುವ ಬಡ ಯುವಕ – ಯುವತಿಯರಿಗೆ ಭರ್ಜರಿ ಗುಡ್ ನ್ಯೂಸ್ : ಸಾಮೂಹಿಕ ವಿವಾಹಕ್ಕೆ ಶೀಘ್ರವೇ ದಿನಾಂಕ, ದೇಗುಲಗಳ ಪಟ್ಟಿ ರಿಲೀಸ್!
ಬೆಂಗಳೂರು : ಮದುವೆಯಾಗುವ ನಿರ್ಧಾರ ಮಾಡಿರುವ ಬಡ ಯುವಕ ಯುವತಿಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಹೌದು ಶೀಘ್ರವೇ ಧಾರ್ಮಿಕ ದತ್ತಿ ಇಲಾಖೆಯಿಂದ ಸಾಮೂಹಿಕ ಕಾರ್ಯಕ್ರಮಕ್ಕೆ ಶೀಘ್ರವೇ ದಿನಾಂಕ, ಹಾಗೂ ದೇಗುಲಗಳ ಪಟ್ಟಿ ಪ್ರಕಟವಾಗಲಿದೆ.
ಕಣಿವೆನಾಡು ಕಾಶ್ಮೀರದಲ್ಲಿ ಇಂದು ಇಂಟರ್ನೆಟ್ ಸೇವೆ ಸ್ಥಗಿತ..!
ಅಲ್ಲದೇ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ವಧು-ವರರಿಗೆ ಸರ್ಕಾರ ಉಡುಗೊರೆ ನೀಡಲಿದ್ದು, ವಧುವಿಗೆ 40 ಸಾವಿರ ರೂ. ಮೌಲ್ಯದ 8 ಗ್ರಾಂ ಚಿನ್ನದ ತಾಳಿ ಜೊತೆಗೆ ಧಾರೆ ಸೀರೆ, ಹೂವಿನ ಹಾರ, ರವಿಕೆ ಕಣ ಖರೀದಿಗೆ 10 ಸಾವಿರ ರೂ. ವರನಿಗೆ ಹೂ ಹಾರ, ಪಂಚೆ, ಶರ್ಟ್, ಶಲ್ಯ ಖರೀದಿಗೆ 5 ಸಾವಿರ ರೂ. ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.
ಡೂಡಲ್ ನಲ್ಲಿ ಭಾರತದ ಏಕತೆಯ ಪರಂಪರೆ ಅನಾವರಣ
ಕಳೆದ ವರ್ಷ ರಾಜ್ಯದ A ವರ್ಗದ 100 ದೇಗುಲಗಳಲ್ಲಿ ರಾಜ್ಯ ಸರ್ಕಾರವೇ ಸಾಮೂಹಿಕ ವಿವಾಹ ಏರ್ಪಡಿಸಿತ್ತು. ಏಪ್ರಿಲ್ 26 ಮತ್ತು ಮೇ. 24 ರಂದು ವಿವಾಹ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಇದೀಗ ಮತ್ತೆ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel