ಶ್ರೀಶೈಲ: ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ದೇವಾಲಯವೊಂದರಲ್ಲಿ ಪವಾಡವೊಂದು ನಡೆದಿದ್ದು, ನಾಗರಹಾವೊಂದು ಹೆಡೆ ಬಿಚ್ಚಿ ಶಿವಲಿಂಗ ಸುತ್ತುವರೆದಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.
ದೇವಾಲಯದ ಶಿವಲಿಂಗದ ಸುತ್ತಲೂ ಹಾವು ಸುತ್ತುವರೆದಿರುವುದು ಭಕ್ತರನ್ನು ಆಶ್ಚರ್ಯಗೊಳಿಸಿದೆ. ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ಪಾತಾಳ ಗಂಗೆಯ ದೇವಸ್ಥಾನದ ವೀಡಿಯೊ ಎನ್ನಲಾಗಿದೆ. ಅಲ್ಲಿದ್ದ ಸ್ಥಳೀಯರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು ವೈರಲ್ ಆಗುತ್ತಿದೆ.
ಪಾತಾಳ ಗಂಗೆಯಲ್ಲಿ ಚಂದ್ರಲಿಂಗದ ಸುತ್ತಲೂ ನಾಗರಹಾವು ಸುತ್ತುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಶ್ರೀಶೈಲದ ಪಾತಾಳ ಗಂಗೆಯಲ್ಲಿ ಚಂದ್ರಲಿಂಗೇಶ್ವರ ಸ್ವಾಮಿಯ ಪುರಾತನ ದೇವಾಲಯವಿದೆ. ಅಲ್ಲಿ ಪ್ರತಿದಿನ ಭಕ್ತರು ಪೂಜೆ ಸಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೂ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಯಿತು. ಆನಂತರ ನಾಗರಹಾವು ಅಲ್ಲಿಗೆ ಬಂದು ಚಂದ್ರಲಿಂಗದ ಸುತ್ತಲೂ ಮಲಗಿರುವುದು ಕಂಡು ಬಂದಿತು ಎಂದು ಸ್ಥಳೀಯರು ಹೇಳಿದ್ದಾರೆ.
శ్రీశైలం పాతాళ గంగ వద్ద వెలసిన చంద్ర లింగానికి చుట్టుకున్న నాగుపాము#saynotodrugs #srisailam #lordshiva #snake #bigtv pic.twitter.com/zKZ5hiojCf
— BIG TV Breaking News (@bigtvtelugu) July 16, 2024
ಈ ಪವಾಡ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ವೀಡಿಯೊದಲ್ಲಿ, ದೊಡ್ಡ ಹಾವು ಕೊಳದ ಮುಂದೆ ಎಲೆಗಳಿಂದ ಮುಚ್ಚಿದ ಶಿವಲಿಂಗವನ್ನು ಸುತ್ತುತ್ತಿರುವಂತೆ ಕಾಣುತ್ತದೆ.