ವಾಷಿಂಗ್ಟನ್: 154 ಕೆಜಿ ತೂಕವಿರುವ ಮಹಿಳೆಯೊಬ್ಬರು ತನ್ನ 10 ವರ್ಷದ ಮಗನ ಮೇಲೆ ಕುಳಿತು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ ನಡೆದಿದೆ. ಡಕೋಟಾ ಲೆವಿ ಸ್ಟೀವನ್ಸ್ (10) ಕೊಲೆಯಾದ ಬಾಲಕ. ಜೆನ್ನಿಫರ್ ಲೀ ವಿಲ್ಸನ್ (48) ಹತ್ಯೆ ಮಾಡಿದ ಪಾಪಿ ತಾಯಿ.
ಮಗನನ್ನೇ ಈ ರೀತಿ ಕೊಲೆ ಮಾಡಿದ್ದಕ್ಕೆ ತಾಯಿಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ತಾಯಿ ಕುಳಿತಿದ್ದರಿಂದಾಗಿ ಮಗ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.








