ರಾಮನಗರ: ಮಹಿಳೆಯೋರ್ವಳು ತನ್ನ ಗಂಡನಿಗೆ ಗೊತ್ತಾಗದಂತೆ ತಾನು ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ರಾಮನಗರದಲ್ಲಿ (Ramanagara) ನಡೆದಿದೆ. ಈ ಕುರಿತು ಪತ್ನಿಯ ವಿರುದ್ಧ ಪತಿಯೇ ದೂರು ನೀಡಿದ್ದು, ಪತ್ನಿ ಹಾಗೂ ಇನ್ನಿತರ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಮನಗರದ ಯಾರಬ್ ನಗರ ನಿವಾಸಿ ಸದ್ದಾಂ ಪಾಷಾ ಹಾಗೂ ನಸ್ರೀನ್ ತಾಜ್ ಕಳೆದ 6 ವರ್ಷಗಳ ಹಿಂದೆ ಮದುವೆ ಆಗಿದ್ದರು. ಅವಳಿ ಮಕ್ಕಳು ಸೇರಿ ಒಟ್ಟು 4 ಮಕ್ಕಳಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, ಪತಿ ಸಾಲ ಮಾಡಿದ್ದ.
ಆದರೆ, ಮಹಿಳೆ ಮಾತ್ರ ತನ್ನ ಗಂಡು ಮಗುವನ್ನು 1.5 ಲಕ್ಷಕ್ಕೆ ಮಾರಾಟ ಮಾಡಿದ್ದಳು. ಕೆಲಸದಿಂದ ಬಂದ ಪತಿ ಇದನ್ನು ಪ್ರಶ್ನಿಸಿದ್ದಾಗ ಆತನ ಮೇಲೆಯೇ ಹಲ್ಲೆ ಮಾಡಿದ್ದಳು. ನಂತರ ಪತಿ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.