ADVERTISEMENT
Wednesday, March 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ತಿಂಗಳಿಗೆ 250 ರೂಪಾಯಿ ಸಂಪಾದನೆ ಮಾಡುತ್ತಿದ್ದ ಪೇಪರ್ ಹಂಚುವ ಹುಡುಗ ಇಂದು ಫ್ಯಾಷನ್ ಕ್ಷೇತ್ರದಲ್ಲಿ ಸಾಧಕ, ನಮ್ಮ ಕರುನಾಡಿನ ಹುಡುಗ

admin by admin
July 25, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ತಿಂಗಳಿಗೆ 250 ರೂಪಾಯಿ ಸಂಪಾದನೆ ಮಾಡುತ್ತಿದ್ದ ಪೇಪರ್ ಹಂಚುವ ಹುಡುಗ ಇಂದು ಫ್ಯಾಷನ್ ಕ್ಷೇತ್ರದಲ್ಲಿ ಸಾಧಕ, ನಮ್ಮ ಕರುನಾಡಿನ ಹುಡುಗ:

ಅದು 2007, ಸಿದ್ ತನ್ನ ತಂದೆಯ ಅಕಾಲಿಕ ಮರಣದಿಂದಾಗಿ ಸಂಸಾರದ ನಿರ್ವಹಣೆಗೆ ತನ್ನ ಏರಿಯಾದಲ್ಲಿ ಪೇಪರ್ ಹಂಚಿ, ಶಾಲೆಗೆ ಹೋಗಲು ಪ್ರಾರಂಭಿಸುತ್ತಾನೆ. ಆಗ ಬರುತ್ತಿದ ಅಲ್ಪ 250 ರೂಗಳ ಮಾಸಿಕ ವರಮಾನ ಯಾವುದಕ್ಕೂ ಸಾಲುವುದಿಲ್ಲ ಎನ್ನುವ ಪರಿಸ್ಥಿತಿ. ಅದೇ ಸಮಯದಲ್ಲಿ ತಾಯಿ ಕೈಗಾರಿಕಾ ಕಾರ್ಖಾನೆಯಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರುತ್ತಾರೆ. ಮುಂದೆ ಹೈಸ್ಕೂಲ್ ಮುಗಿಸಿ ಹೊಟ್ಟೆ ಪಾಡಿಗೊಸ್ಕರ ಆಫೀಸ್ ಬಾಯ್ ಯಾಗಿ ಒಂದು ಸಣ್ಣ ಚಾರ್ಟರ್ಡ್ ಅಕೌಂಟೆಂಟ್ ಆಫೀಸಿಗೆ ಸೇರುತ್ತಾನೆ ಸಿದ್. ವಿಪರ್ಯಾಸ ಏನೆಂದರೆ ತಾನು ಆಫೀಸಿಗೆ ಹೋಗುವ ಬಸ್ಸಿನಲ್ಲಿ ದಿನನಿತ್ಯ ಆತನ ಇತರ ಶಾಲಾ ಗೆಳೆಯರು ತಮ್ಮ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಿರುತ್ತಾರೆ.‌ ಅದೆಷ್ಟೋ ಬಾರಿ ತನ್ನ ಗೆಳೆಯರಿಂದ ಆತ ಕೇವಲವಾಗಿ ಅನಿಸಿಕೊಂಡದ್ದು ಇದೆ. ಮುಂದೆ ಆತ ಹೊಟ್ಟೆ ಪಾಡಿಗಾಗಿ ಅನೇಕ ಕೆಲಸಗಳನ್ನು ಬದಲಾಯಿಸುತ್ತಾ ಸಂಕಷ್ಟಗಳ ನಡುವೆಯೇ ಬದುಕುತ್ತಾನೆ. ಆಫೀಸ್ ಬಾಯ್ ಆಗಿದ್ದ ಆ ಹುಡುಗನಲ್ಲಿ ಒಂದು ಇಡೀ ಅಂಗಡಿಯನ್ನು ನಿಭಾಯಿಸಬಹುದೆನ್ನುವ ಆತ್ಮ ಬಲ ವೃದ್ಧಿಯಾಗುತ್ತದೆ.

Related posts

ಆರ್ ಸಿಬಿ ಕಲಿಗಳ ಜತೆ ಕನ್ನಡಿಗರ ನಂದಿನಿ ದರ್ಬಾರ್ ಐಪಿಎಲ್ ಮೂಲಕ ವಿಶ್ವಮಟ್ಟಕ್ಕೆ ಲಗ್ಗೆ ಇಡಲು ಕೆಎಂಎಫ್ ಮಾಸ್ಟರ್ ಪ್ಲಾನ್

ಆರ್ ಸಿಬಿ ಕಲಿಗಳ ಜತೆ ಕನ್ನಡಿಗರ ನಂದಿನಿ ದರ್ಬಾರ್ ಐಪಿಎಲ್ ಮೂಲಕ ವಿಶ್ವಮಟ್ಟಕ್ಕೆ ಲಗ್ಗೆ ಇಡಲು ಕೆಎಂಎಫ್ ಮಾಸ್ಟರ್ ಪ್ಲಾನ್

March 25, 2026
ಸದ್ಯಕ್ಕೆ ಗ್ರಾಮ ಪಂಚಾಯ್ತಿ ಚುನಾವಣೆ ಇಲ್ಲ??

ಸದ್ಯಕ್ಕೆ ಗ್ರಾಮ ಪಂಚಾಯ್ತಿ ಚುನಾವಣೆ ಇಲ್ಲ??

March 25, 2026

ಮುಂದೆ ಜೀವನದ ಪಯಣದಲ್ಲಿ “ಮಂತ್ರಿ ಮಾಲ್” ನಲ್ಲಿರುವ “ನ್ಯೂಯು” ಅನ್ನುವ ಸ್ಟೋರ್ ಉಸ್ತುವಾರಿ ಈತನಿಗೆ ಸಿಗುತ್ತದೆ. ಬರುತ್ತಿದ 15000 ಮಾಸಿಕ ಸಂಬಳ, ದಿನ ನಿತ್ಯದ ಟ್ರೈನ್ ಓಡಾಟ. ಇದೇ ಸಮಯದಲ್ಲಿ ಮಾಲ್‌ನ ಮಾರ್ಕೆಟಿಂಗ್ ಮತ್ತು ಕಾರ್ಯಾಚರಣೆಯ ತಂಡದೊಂದಿಗೆ ಸ್ನೇಹ ಬೆಳೆಯುತ್ತದೆ ‌ಮತ್ತು ಅಲ್ಲಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ಉಲ್ಲಾಸ್‌ ಗೆ ಸಿದ್ ಹತ್ತಿರವಾಗುತ್ತಾನೆ. ಆದರೆ ಉಲ್ಲಾಸ್ ಕೆಲಸ ಬಿಟ್ಟ ಕಾರಣ ಆತನ ಬದಲಿಯಾಗಿ ಸಿದ್ ನ ಹೆಸರು ಕೇಳಿ ಬರುತ್ತದೆ. ನಂತರ ಸಿದ್ ಈವೆಂಟ್ ಮ್ಯಾನೇಜ್ಮೆಂಟ್ ವಲಯದಲ್ಲಿ ಮಧ್ಯವರ್ತಿಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸುತ್ತಾನೆ.

ಸ್ಕ್ವೇರ್ ಒನ್ ಎಕ್ಸ್‌ಪೀರಿಯೆನ್ಷಿಯಲ್ ಮಾರ್ಕೆಟಿಂಗ್ ಸಂಸ್ಥೆ, ಫ್ಯಾಷನ್ ಹಿನ್ನೆಲೆಯನ್ನು ಹೊಂದಿದ್ದು, ಬೆಂಗಳೂರಿನಲ್ಲಿ ಕೆಲವು ಫ್ಯಾಶನ್ ಬ್ರಾಂಡ್‌ಗಳನ್ನು ಮಾರುಕಟ್ಟೆಗೆ ತರಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಇಲ್ಲಿ ಕೆಲಸ ಮಾಡಿದ್ದರಿಂದ ಸಿದ್ ನ ಫ್ಯಾಶನ್ ಪೋರ್ಟ್ಫೋಲಿಯೊ ಮತ್ತು ಸಂಬಂಧಪಟ್ಟ ಮಧ್ಯವರ್ತಿಗಳ ಜೊತೆಗಿನ ಸಂಬಂಧಗಳನ್ನು ಬೆಳೆಸಲು ಆತನಿಗೆ ಸಹಾಯವಾಗುತ್ತದೆ. ‌ ಫ್ಯಾಷನ್ ಮತ್ತು ಕಾರ್ಯಕ್ರಮದ ಬಗ್ಗೆ, ಗ್ರಾಹಕರನ್ನು ನಿಭಾಯಿಸುವುದು, ನೆಟ್‌ವರ್ಕ್ ನಿರ್ಮಿಸುವುದು ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ಬಳಸುವಂತಹ ತಾಂತ್ರಿಕ ಕೌಶಲ್ಯಗಳ ಬಗ್ಗೆ ಜ್ಞಾನವನ್ನು ಸಂಪಾದಿಸುವ ಸಿದ್ ಗೆ ತಾನು ಖಂಡಿತವಾಗಿಯೂ ಬಹಳ ದೂರ ಬಂದಿದ್ದೇನೆ ಎಂದು ಅನಿಸುತ್ತದೆ.

ಜುಲೈ 2017ರಲ್ಲಿ, ಸಿದ್ “ವೋಗ್ ಮ್ಯಾಗಜಿನ್” ಗಾಗಿ ಫ್ರೀ ಲ್ಯಾನ್ಸರ್ ಆಗಿ ಕೆಲಸ ಮಾಡಲಾರಂಭಿಸುತ್ತಾನೆ, ಮ್ಯಾಗಜಿನ್ ನ ಕವರ್ ಪಿಕ್ಚರ್‌ ಜವಾಬ್ದಾರಿ ಇವನಿಗೆ ನೀಡಲಾಗುತ್ತದೆ. ಆದರೆ ಆ ಕವರ್ ಪಿಕ್ಚರ್ ವೈರಲ್ ಆದ ಕಾರಣ ಅನೇಕ ಇತರ ನಿಯತಕಾಲಿಕೆಗಳು ಮತ್ತು ಮಧ್ಯವರ್ತಿಗಳೊಂದಿಗೆ ಫ್ರೀ ಲ್ಯಾನ್ಸರ್ ಆಗಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಅವರು ಸಿದ್ ಗೆ ಇನ್ನೂ ಹೆಚ್ಚಿನ ಯೋಜನೆಗಳನ್ನು ನೀಡಲು ಉತ್ಸುಕರಾಗಿರುತ್ತಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ನನ್ನ ಸ್ವಂತ ವ್ಯವಹಾರವನ್ನು ಹೊಂದಬೇಕು ಎಂದು ಇಚ್ಛಿಸಿದ ಸಿದ್, ಸ್ಕ್ವೇರ್ ಒನ್‌ನಲ್ಲಿ ಕೆಲಸವನ್ನು ತ್ಯಜಿಸಿ 2017 ರಲ್ಲಿ ಸಿದ್ ಪ್ರೊಡಕ್ಷನ್ಸ್ ಅನ್ನು ನೋಂದಾಯಿಸುತ್ತಾನೆ.

ಮೊದಮೊದಲು ಯಾವುದೇ ನಿರ್ದಿಷ್ಟ ಕ್ಲೈಂಟ್ ಇಲ್ಲದ ಕಾರಣ ಸಾಮಾಜಿಕ ಜಾಲತಾಣಗಳ ಮೂಲಕ ಗಮನ ಸೆಳೆಯಲು ನಿರ್ಧರಿಸಿದ ಸಿದ್‌ ಗೆ ಅಚಾನಕ್ ಆಗಿ ಮಿಂತ್ರಾ ಕಣ್ಣಿಗೆ ಬೀಳುತ್ತದೆ. ಅವರು ಸಿದ್ ನ ಸಂಪರ್ಕಿಸಿ 15 ಲಕ್ಷ ರೂಪಾಯಿ ಮೌಲ್ಯದ ಐದು ದಿನಗಳ ಪ್ರಚಾರದ ಚಿತ್ರೀಕರಣ ಮಾಡಲು ಹೇಳುತ್ತಾರೆ. ಆದರೆ ಸಿದ್ ನಲ್ಲಿ ಅಷ್ಟು ದುಡ್ಡು ಇಲ್ಲದ ಕಾರಣ ತನ್ನ ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ಸಾಲ ಮಾಡಿ ಕೊನೆಗೆ ಕೊಟ್ಟ ಕೆಲಸವನ್ನು ನಿರ್ವಹಿಸುತ್ತಾನೆ. ಹೆಚ್ಚಿನ ಲಾಭ ಸಿಗದಿದ್ದರೂ ಮುಂದೆ ಈತನ ಕೆಲಸಕ್ಕೆ ಇನ್ನಷ್ಟು ಪ್ರಾಜೆಕ್ಟ್ ವರ್ಕ್ ಸಿಗುತ್ತದೆ. ನಂತರದ ದಿನಗಳಲ್ಲಿ ಫ್ಯೂಚರ್ ಗ್ರೂಪ್, ಇಂಡಿಗೋ ನೇಶನ್, ಲೈಫ್ ಸ್ಟೈಲ್, ಮ್ಯಾಕ್ಸ್ ಮುಂತಾದ ಗ್ರಾಹಕರಿಗೆ ಚಿತ್ರೀಕರಣ, ಸ್ಟೋರ್ ಪ್ರಾರಂಭಕ್ಕೆ ವಿನ್ಯಾಸ ತಯಾರಿಕೆಗೆ ಗ್ರಾಹಕರು ಬೇಡಿಕೆ ಇಡುತ್ತಾರೆ. ‌

ಪೇಪರ್ ಮಾರುತ್ತ ಜೀವನ ಕಟ್ಟಿಕೊಂಡ ಒಬ್ಬ ಕರುನಾಡಿನ ಹಠವಾದಿ ಪೋರ ಇಂದು ಫ್ಯಾಷನ್ ಲೋಕದ ವಿನ್ಯಾಸಕ್ಕೆ ಲಗ್ಗೆ ಇಟ್ಟು ಹೊಸ ಛಾಪು ಮೂಡಿಸಿದ್ದು ನಿಜಕ್ಕೂ ಪ್ರೇರಣೆ ಮೂಡಿಸುವ ಕಥಾನಕ. ಹತ್ತು ಹಲವು ಕೆಲಸಗಳನ್ನು ಮಾಡಿ ಕೇವಲ ಛಲವೊಂದರ ಹಿಂದೆ ಬಿದ್ದು ಯಶಸ್ವಿಯಾದ ಸಿದ್ ನ ಸಾಧನೆಯನ್ನು ಮೆಚ್ಚಲೇ ಬೇಕು. ಉದರನಿಮಿತ್ತ ಹತ್ತು ಹಲವು ಆಫೀಸ್ ಸುತ್ತಿದ ಸಿದ್ ಇಂದು 50 – 80 ಜನರಿಗೆ ಚಿತ್ರೀಕರಣದ ಸಮಯದಲ್ಲಿ ಕೆಲಸ ನೀಡುತ್ತಿದ್ದಾರೆ. ಮುಂದೊಂದು ದಿನ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡಬೇಕೆನ್ನುವ ಹಂಬಲದ ಜೊತೆ ಫ್ಯಾಷನ್ ಜಗತ್ತಿನ ಹೊಸ ಆಯಮಕ್ಕೆ ತೆರೆದುಕೊಳ್ಳಲು ಮುಂಬೈ ದೆಹಲಿಯಲ್ಲಿ ಹೊಸ ಆಫೀಸ್ ಪ್ರಾರಂಭಿಸಬೇಕು ಎನ್ನುವ ಹೆಬ್ಬಯಕೆಯಿದೆ.

Tags: athma nirbharabangalorefashionindiakarnatakamallMantriMyntraNewUpaperSchoolsidspecial article
ShareTweetSendShare
Join us on:

Related Posts

ಆರ್ ಸಿಬಿ ಕಲಿಗಳ ಜತೆ ಕನ್ನಡಿಗರ ನಂದಿನಿ ದರ್ಬಾರ್ ಐಪಿಎಲ್ ಮೂಲಕ ವಿಶ್ವಮಟ್ಟಕ್ಕೆ ಲಗ್ಗೆ ಇಡಲು ಕೆಎಂಎಫ್ ಮಾಸ್ಟರ್ ಪ್ಲಾನ್

ಆರ್ ಸಿಬಿ ಕಲಿಗಳ ಜತೆ ಕನ್ನಡಿಗರ ನಂದಿನಿ ದರ್ಬಾರ್ ಐಪಿಎಲ್ ಮೂಲಕ ವಿಶ್ವಮಟ್ಟಕ್ಕೆ ಲಗ್ಗೆ ಇಡಲು ಕೆಎಂಎಫ್ ಮಾಸ್ಟರ್ ಪ್ಲಾನ್

by Shwetha
March 25, 2026
0

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿರುವ ಕೆಎಂಎಫ್ ನ ನಂದಿನಿ ಬ್ರ್ಯಾಂಡ್ ಇದೀಗ ಕ್ರಿಕೆಟ್ ಜಗತ್ತಿನ ರಣಕಣಕ್ಕೆ ಇಳಿದಿದೆ. ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು...

ಸದ್ಯಕ್ಕೆ ಗ್ರಾಮ ಪಂಚಾಯ್ತಿ ಚುನಾವಣೆ ಇಲ್ಲ??

ಸದ್ಯಕ್ಕೆ ಗ್ರಾಮ ಪಂಚಾಯ್ತಿ ಚುನಾವಣೆ ಇಲ್ಲ??

by Shwetha
March 25, 2026
0

ರಾಜ್ಯದಲ್ಲಿ ಬಹುಕಾಲದಿಂದ ಮುಂದೂಡಲಾಗುತ್ತಿರುವ ಗ್ರಾಮ ಪಂಚಾಯ್ತಿ ಚುನಾವಣೆಗಳು ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಕಾಣುತ್ತಿದೆ. ಸುಮಾರು 5,950 ಗ್ರಾಮ ಪಂಚಾಯತ್‌ಗಳ ಚುನಾವಣೆಗೆ ಸಂಬಂಧಿಸಿದಂತೆ ಮೀಸಲು ಪಟ್ಟಿಯನ್ನು ಅಂತಿಮಗೊಳಿಸಲು...

ಬೆಂಗಳೂರಿನ ವಾಹನ ಸವಾರರೇ ಎಚ್ಚರ  ಇಂದಿನಿಂದ ಮತ್ತೆ ಶುರುವಾಗಲಿದೆ ಟೋಯಿಂಗ್ ನೋ ಪಾರ್ಕಿಂಗ್ ಜಾಗದಲ್ಲಿ ಗಾಡಿ ನಿಲ್ಲಿಸಿದರೆ ಬೀಳಲಿದೆ 2000 ರೂಪಾಯಿ  ದಂಡ ಗ್ಯಾರಂಟಿ!

ಬೆಂಗಳೂರಿನ ವಾಹನ ಸವಾರರೇ ಎಚ್ಚರ ಇಂದಿನಿಂದ ಮತ್ತೆ ಶುರುವಾಗಲಿದೆ ಟೋಯಿಂಗ್ ನೋ ಪಾರ್ಕಿಂಗ್ ಜಾಗದಲ್ಲಿ ಗಾಡಿ ನಿಲ್ಲಿಸಿದರೆ ಬೀಳಲಿದೆ 2000 ರೂಪಾಯಿ ದಂಡ ಗ್ಯಾರಂಟಿ!

by Shwetha
March 25, 2026
0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ಮುಂದೆ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಏಕೆಂದರೆ ನಗರದಲ್ಲಿ ಸಂಚಾರಿ ಪೊಲೀಸರು ಮತ್ತೆ ಟೋಯಿಂಗ್ ಅಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ....

ತೈಲ ಕೊರತೆ ನೀಗಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ: ಮೋದಿ

ತೈಲ ಕೊರತೆ ನೀಗಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ: ಮೋದಿ

by Shwetha
March 25, 2026
0

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳ ನಡುವೆಯೂ ತೈಲ ಕೊರತೆಯನ್ನು ಎದುರಿಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ...

ಕೇರಳ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಭಿನಂದನೆಗಳು -ಹೈಕಮಾಂಡ್ ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಕೇರಳಕ್ಕೆ ಹತ್ತು ಕೋಟಿ ನೆರವು : ಆರ್ ಅಶೋಕ್ ಆಕ್ರೋಶ

ಕೇರಳ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಭಿನಂದನೆಗಳು -ಹೈಕಮಾಂಡ್ ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಕೇರಳಕ್ಕೆ ಹತ್ತು ಕೋಟಿ ನೆರವು : ಆರ್ ಅಶೋಕ್ ಆಕ್ರೋಶ

by Shwetha
March 25, 2026
0

ಬೆಂಗಳೂರು: ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿರುವಾಗ, ದೆಹಲಿ ನಾಯಕರನ್ನು ಮೆಚ್ಚಿಸಿ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಏಕೈಕ ಉದ್ದೇಶದಿಂದ ನೆರೆ ರಾಜ್ಯ ಕೇರಳಕ್ಕೆ 10 ಕೋಟಿ ರೂಪಾಯಿಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram