ಕೋಲಾರ: ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಸೈಕೋ ಕಿಲ್ಲರ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸೈಕೋ ಕಿಲ್ಲರ್‌ನನ್ನು ಮುಳಬಾಗಿಲು ಪೊಲೀಸರು (Mulbagal Police) ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಮುಳಬಾಗಿಲಿನ ಹೈದರ್ ನಗರದ ನಿವಾಸಿ ಆಟೋ ಡ್ರೈವರ್ ಸೈಯ್ಯದ್ ಸುಹೇಲ್ ಎಂದು ಗುರುತಿಸಲಾಗಿದೆ. ಆರೋಪಿ ಸೆ.24 ರಂದು 50 ವರ್ಷದ ಮಹಿಳೆಯ ಕೊಲೆ ಮಾಡಿ, ಅತ್ಯಾಚಾರ ನಡೆಸಿದ್ದ.
ಮಹಿಳೆಯನ್ನು ಪಳ್ಳಿಗರಪಾಳ್ಯದ ಸುಶೀಲಮ್ಮ ಕೊಲೆಯಾಗಿದ್ದ ಮಹಿಳೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.








