ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಮಧ್ಯೆ ಹೊಡೆದಾಟ
ಕೋಲಾರ: ಜಿಲ್ಲೆಯ ಅಂತರಗಂಗೆ ಬೆಟ್ಟದಲ್ಲಿನ ತೇರಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಮಧ್ಯೆ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ 5 ಮಹಿಳೆಯರು ಸೇರಿ ಒಟ್ಟು 10 ಮಂದಿಗೆ ಗಾಯವಾಗಿದೆ. ಗಾಯಳುಗಳನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದರಾತ್ರಿ ಕಾರು ಹಾಗು ಬೈಕ್ ನಡುವೆ ಅಪಘಾತ ಸಂಭವಿಸಿತ್ತು, ಈ ವಿಚಾರಕ್ಕೆ ಕಾರಿನಲ್ಲಿದ್ದವರು ಗುಂಪು ಕಟ್ಟಿಕೊಂಡು ಬಂದು ಗ್ರಾಮಸ್ತರ ಜೊತೆಗೆ ಗಲಾಟೆ ಮಾಡಿದ್ದಾರೆ. ಗಲಾಟೆಗೆ ಗುಂಪಿನ ಮೇಲೆ ತೇರಹಳ್ಳಿ ಗ್ರಾಮಸ್ತರು ಹಲ್ಲೆ ಮಾಡಿದ್ದಾರೆ.
ರಾತ್ರಿ ಜಿಲ್ಲಾಸ್ಪತ್ರೆ ಬಳಿ ಸೇರಿದ್ದ ಎರಡೂ ಗುಂಪಿನ ಕಡೆಯವರನ್ನು, ನಗರಠಾಣಾ ಪೋಲೀಸರು ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದರು. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.









