ಬಳ್ಳಾರಿ: ದೆಹಲಿಯ ಕರ್ನಾಟಕ ಭವನದ (Delhi Karnataka Bhavan) ನೌಕರಸ್ಥನಾಗಿದ್ದ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಈ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾ ಹೊಸಳ್ಳಿ ಹೊರವಲಯದಲ್ಲಿ ನಡೆದಿದೆ. ಎ ಬಿ ಅಯ್ಯನಹಳ್ಳಿ ಗ್ರಾಮದ ಮಾರುತಿ(35) ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಾರುತಿ ದೆಹಲಿಯ ಕರ್ನಾಟಕ ಭವನದಲ್ಲಿ ಅಡುಗೆ ವಿಭಾಗದಲ್ಲಿ (Kitchen Department) ಕೆಲಸ ಮಾಡುತ್ತಿದ್ದ.
ಪತ್ನಿ ಹಾಗೂ ಮಕ್ಕಳನ್ನು ಪತ್ನಿಯ ತವರು ಮನೆಗೆ ಬಿಟ್ಟು ತಂದೆ, ತಾಯಿಯನ್ನು ನೋಡಿಕೊಂಡು ಬರುವೆ ಎಂದು ಮಾರುತಿ ಮೂರು ದಿನಗಳ ಹಿಂದೆ ದೆಹಲಿಯಿಂದ ಸ್ವಂತ ಗ್ರಾಮಕ್ಕೆ ಬಂದಿದ್ದರು. ಆದರೆ, ಮಂಗಳವಾರ ಸಂಜೆ ಕಾನಾಹೊಸಳ್ಳಿ ಹೊರವಲಯದ ಹುಣಸೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸದ್ಯ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.