ವಾಷಿಂಗ್ಟನ್: ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿದ ಪರಿಣಾಮ ಭಾರತೀಯ ಮೂಲದ ಯುವಕ ಅಮೆರಿಕದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ತೆಲಂಗಾಣದ (Telangana) 23 ವರ್ಷದ ವಿದ್ಯಾರ್ಥಿಯೊಬ್ಬ (Student) ಅಮೆರಿಕದಲ್ಲಿ (America) ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿರುವ ಯುವಕನನ್ನು ತೆಲಂಗಾಣದ ಉಪ್ಪಲ್ ಮೂಲದ ಆರ್ಯನ್ ರೆಡ್ಡಿ ಎನ್ನಲಾಗಿದೆ. ಯುವಕ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ.
ಈ ವಿಷಯವಾಗಿ ಮಾತನಾಡಿರುವ ಆರ್ಯನ್ ತಂದೆ, ವಿದೇಶದಲ್ಲಿ ಓದುತ್ತಿರುವ ಮಕ್ಕಳು ಗನ್ ಲೈಸೆನ್ಸ್ ಪಡೆಯುವ ಕುರಿತು ಎಚ್ಚರಿಕೆ ವಹಿಸಬೇಕು. ಆರ್ಯನ್ ಬೇಟೆಯಾಡುವ ಗನ್ ಪರವಾನಗಿಯನ್ನು ಪಡೆದಿದ್ದ. ವಿದ್ಯಾರ್ಥಿಗಳು ಅಲ್ಲಿ ಬಂದೂಕಿನ ಪರವಾನಗಿ ಪಡೆದುಕೊಳ್ಳಬಹುದು ಎಂದು ನಮಗೆ ತಿಳಿದಿರಲಿಲ್ಲ. ಯಾವುದೇ ಪೋಷಕರಿಗೂ ಇಂತಹ ಸ್ಥಿತಿ ಎದುರಾಗಬಾರದು ಎಂದು ಕಣ್ಣೀರು ಸುರಿಸಿದ್ದಾರೆ.