ಚಿಕ್ಕೋಡಿ : ಕೊರೊನಾ ವೈರಸ್ ಹಿನ್ನೆಲೆ ದೇಶದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾದ ಹಿನ್ನೆಲೆ ಮಾರುಕಟ್ಟೆಗೆ ಭಿನ್ನ ವಿಭಿನ್ನ ಮಾಸ್ಕ್ ಗಳು ಲಗ್ಗೆ ಇಡುತ್ತಿವೆ. ಇದೀಗ ಬೆಳ್ಳಿ ಬಳಸಿ ಸಿದ್ಧಪಡಿಸಿರುವ ಬೆಳ್ಳಿ ಮಾಸ್ಕ್ ಗಳು ಕೂಡ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ.
ಮಹಾರಾಷ್ಟ್ರದ ಕೊಲ್ಲಾಪೂರ ನಗರದ ಆಭರಣ ವ್ಯಾಪಾರಿ ಸಂದೀಪ್ ಸಾಂಗವಕರ ಎಂಬುವವರು ಈ ಬೆಳ್ಳಿ ಮಾಸ್ಕ್ ತಯಾರಿಸಿದ್ದಾರೆ. ವಿಶೇಷವಾಗಿ ಕೊರೊನಾ ಭೀತಿಯಲ್ಲಿ ಮದುವೆ ಆಗುತ್ತಿರುವ ನೂತನ ವಧು-ವರರಿಗಾಗಿ ಈ ಮಾಸ್ಕ್ ತಯಾರಿಸಲಾಗಿದೆಯಂತೆ.
ಸದ್ಯ ಈ ಮಾಸ್ಕ್ ಗೆ ಡಿಮ್ಯಾಂಡ್ ಹೆಚ್ಚಾಗುತ್ತಿದ್ದು, ಉಡುಗೊರೆ ನೀಡುವುದಕ್ಕೂ ಈ ಮಾಸ್ಕ್ ಕೊಳ್ಳಲು ಜನ ತಯಾರಾಗಿದ್ದಾರೆ.
ಇನ್ನು ಈ ಬೆಳ್ಳಿ ಮಾಸ್ಕ್ ಗಳನ್ನು 20 ರಿಂದ25 ಗ್ರಾಂ ತೂಕದಲ್ಲಿ ತಯಾರಿಸಲಾಗಿದ್ದು, ಸುಮಾರು 2,500 ರೂಪಾಯಿ 3 ಸಾವಿರ ರೂಪಾಯಿ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಿವೆ.








