ಶಿವಮೊಗ್ಗ: ಸ್ವಂತ ಮಗ ಸುತ್ತಿಗೆಯಿಂದ ತಂದೆಗೆ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ (Shivamogga) ಶಿಕಾರಿಪುರದಲ್ಲಿ (Shikaripura) ನಡೆದಿದೆ. ಮುಸ್ತಾಫ ಬೇಗ್ (42) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಆತನ ಮಗ ಶಾಹಿದ್ ಬೇಗ್ (22) ಕೊಲೆ ಮಾಡಿರುವ ಆರೋಪಿ. ಆದರೆ, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಯಾವುದೇ ಕ್ಷುಲ್ಲಕ ಕಾರಣಕ್ಕೆ ತಂದೆ ಹಾಗೂ ಮಗನ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಸುತ್ತಿಗೆಯಿಂದ ಆರೋಪಿ ತನ್ನ ತಂದೆಯ ತಲೆಗೆ ಹೊಡೆದಿದ್ದಾನೆ. ಇದರಿಂದಾಗಿ ಮುಸ್ತಾಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.