ಮೈಸೂರು : ತಾಯಿ ಸಾವಿನ ನೋವಲ್ಲಿಯೂ ಮೈಸೂರಿನ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದಾಳೆ.
ಬಿರಿಹುಂಡಿ ಗ್ರಾಮದ ದೀಪಾ ಎಂಬ ವಿದ್ಯಾರ್ಥಿನಿ ಪರೀಕ್ಷೆ ಬರೆಯುತ್ತಿದ್ದು, ಕ್ಯಾನ್ಸರ್ ನಿಂದಾಗಿ ಬಳಲುತ್ತಿದ್ದ ದೀಪಾಳ ತಾಯಿ ನಿನ್ನೆ ಕೊನೆಯುಸಿರೆಳೆದಿದ್ದಾರೆ.
ತಾಯಿಯ ಮರಣದಿಂದ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದ ಬಾಲಕಿಗೆ ಬೀರಿಹುಂಡಿ ಗ್ರಾಪಂ ಮಾಜಿ ಸದಸ್ಯ ಶಿವಣ್ಣ ಧೈರ್ಯ ತುಂಬಿ ತಮ್ಮ ಕಾರಿನಲ್ಲೇ ಪರೀಕ್ಷೆ ಕೇಂದ್ರಕ್ಕೆ ಕರೆದುಕೊಂಡು ಬಿಟ್ಟಿದ್ದಾರೆ. ಪರೀಕ್ಷೆ ಬರೆದ ಬಳಿಕ ದೀಪಾ ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾಳೆ.








