ಕಾರವಾರ: ಕೋರಿಕೆ ಈಡೇರಿಸಬೇಕೆಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ದೇವರ ಮೇಲೆ ಬರೆದಿದ್ದಾನೆ ಎನ್ನಲಾಗಿದೆ.
ಉತ್ತರ ಕನ್ನಡದ (Uttara Kannada) ಶಿರಸಿಯಲ್ಲಿ ಪಿಯುಸಿ ವಿದ್ಯಾರ್ಥಿ (PUC Student) ಶಿವನ ಶಿರದ ಮೇಲೆಯೇ ಬರೆದಿದ್ದಾನೆ. ಈ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಸಿಯ ನರಬೈಲ್ ಗ್ರಾಮದ ಸೋಮೇಶ್ವರ ದೇವಸ್ಥಾನದ ಶಿವಲಿಂಗದ (Shivalinga) ಮೇಲೆ ಇಂಗ್ಲಿಷ್ನಲ್ಲಿ ಜೆ.ಇ 2024, 2026 ಎಂದು ಬರೆಯಲಾಗಿತ್ತು. ಇದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದರು. ಸಿಸಿ ಕ್ಯಾಮರಾ ನೋಡಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಕೆ.ಹೆಚ್. ಬಿ ಕಾಲೋನಿಯ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿ ಮೊದಲ ವರ್ಷದಲ್ಲಿ ಶೇ. 98 ಅಂಕ ಪಡೆದು ಉತ್ತೀರ್ಣನಾಗಿದ್ದ. ಈತನಿಗೆ ದೇವರ ಮೇಲೆ ನಂಬಿಕೆ ಹೆಚ್ಚಿತ್ತು. ಜೆ.ಇ ಪರೀಕ್ಷೆ ಕಟ್ಟಿದ್ದ. ಫಲಿತಾಂಶದಲ್ಲಿ ಹೆಚ್ಚು ಅಂಕ ಬಾರದ ಹಿನ್ನೆಲೆಯಲ್ಲಿ ಹೀಗೆ ಬರೆದಿದ್ದಾನೆ ಎನ್ನಲಾಗಿದೆ.