2006ರಲ್ಲಿ ಕಳೆದು ಕೊಂಡ ಪರ್ಸ್ 14 ವರ್ಷಗಳ ನಂತರ ಪತ್ತೆಯಾದ ಆಶ್ಚರ್ಯಕರ ಘಟನೆ ಮುಂಬೈನಲ್ಲಿ ನಡೆದಿದೆ.
2006 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಪನ್ವೆಲ್ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹೇಮಂತ್ ಪಡಲ್ಕರ್ ಎಂಬ ವ್ಯಕ್ತಿ ತನ್ನ ಪರ್ಸ್ ಅನ್ನು ಕಳೆದುಕೊಂಡಿದ್ದರು ಎಂದು ಸರ್ಕಾರ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಈ ವರ್ಷದ ಏಪ್ರಿಲ್‌ನಲ್ಲಿ, ವಾಶಿಯ ಜಿಆರ್‌ಪಿ ಯಿಂದ ಕರೆ ಬಂದಿದ್ದು, ಪರ್ಸ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು. ಆದರೆ ಆ ಸಮಯದಲ್ಲಿ ಕೊರೋನಾ ವೈರಸ್ ಕಾರಣದಿಂದ ಲಾಕ್ ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಅವರಿಗೆ ಪರ್ಸ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಲಾಕ್ ಡೌನ್ ಸಡಿಲಿಕೆ ಬಳಿಕ ಮುಂಬೈನ ಪನ್ವೆಲ್ ನಿವಾಸಿ ಹೇಮಂತ್ ಪಡಲ್ಕರ್ ಇತ್ತೀಚೆಗೆ ವಾಶಿಯಲ್ಲಿರುವ ಜಿಆರ್‌ಪಿ ಕಚೇರಿಗೆ ಹೋಗಿ ತಮ್ಮ ಪರ್ಸ್ ಅನ್ನು ಪಡೆದು ಕೊಂಡಿದ್ದಾರೆ.
2006 ರ ಸಮಯದಲ್ಲಿ ನನ್ನ ಪರ್ಸ್ ನಲ್ಲಿ 900 ರೂ ಇದ್ದಿದ್ದು, ಅದರಲ್ಲಿ ವಾಶಿ ಜಿಆರ್‌ಪಿ 300 ರೂ ಯನ್ನು ಹಿಂತಿರುಗಿಸಿದ್ದು, 100 ರೂಗಳನ್ನು ಅವರ ಸ್ಟಾಂಪ್ ಪೇಪರ್ ಕೆಲಸಕ್ಕಾಗಿ ಕಡಿತಗೊಳಿಸಿದರು. ಉಳಿದ 500 ರೂ ಹಳೆ ನೋಟನ್ನು ಹೊಸದರೊಂದಿಗೆ ವಿನಿಮಯ ಮಾಡಿಕೊಂಡ ನಂತರ ಹಿಂದಿರುಗಿಸಲಾಗುವುದು ಎಂದು ಪಡಲ್ಕರ್ ತಿಳಿಸಿದರು.
ಪಡಲ್ಕರ್ ಅವರು ತಮ್ಮ ಹಣವನ್ನು ಮರಳಿ ಪಡೆದಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.
ಪಡಲ್ಕರ್ ಅವರ ಪರ್ಸ್ ಕದ್ದವರನ್ನು ಸ್ವಲ್ಪ ಸಮಯದ ಹಿಂದೆ ಬಂಧಿಸಲಾಗಿದೆ ಎಂದು ಜಿಆರ್ಪಿ ಅಧಿಕಾರಿ ತಿಳಿಸಿದ್ದಾರೆ.
ನಾವು ಪಡಲ್ಕರ್ ಅವರ ಪರ್ಸ್ ನಲ್ಲಿ 900 ರೂ. ಇದ್ದು, ನಾವು 300 ರೂಗಳನ್ನು ಅವರಿಗೆ ಹಸ್ತಾಂತರಿಸಿದ್ದೇವೆ.500 ರೂ ನೋಟ್ ಅನ್ನು ಹೊಸದರೊಂದಿಗೆ ವಿನಿಮಯ ಮಾಡಿದ ನಂತರ ಅವರಿಗೆ ಹಿಂದಿರುಗಿಸಲಾಗುವುದು ಎಂದು ಅವರು ಹೇಳಿದರು