ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ಯುವಕನೊರ್ವ ಇಬ್ಬರು ಪ್ರೇಯಸಿರನ್ನು ವಿವಾಹವಾಗಿದ್ದಾನೆ.ಕೆಲ ದಿನಗಳ ಹಿಂದೆ ಯುವಕ, ಯುವತಿಯೊಬ್ಬಳ ಪ್ರೀತಿಗೆ ಬಿದ್ದಿದ್ದನಂತೆ. ಯುವತಿ ಮದುವೆಯಾಗುವಂತೆ ಒತ್ತಡ ಹೇರಿದ್ದಳಂತೆ. ಇಲ್ಲವಾದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಳಂತೆ. ಈ ವೇಳೆ ಯುವತಿಗೆ ಯುವಕ ಹೊಡೆದಿದ್ದ ಎನ್ನಲಾಗಿದೆ. ಕೋಪಗೊಂಡ ಯುವತಿ ಪೊಲೀಸರಿಗೆ ದೂರು ನೀಡಿದ್ದಳಂತೆ.
ಎರಡು ದಿನ ಜೈಲಿನಲ್ಲಿದ್ದು, ಬಂದಿದ್ದ ಯುವಕ ಯುವತಿ ಜೊತೆ ಮದುವೆಗೆ ಮುಂದಾಗಿದ್ದ.ಅದರಂತೆ ದೇವಾಲಯದಲ್ಲಿ ಮದುವೆಯಾಗಲು ನಿರ್ಧರಿಸಿ, ದೇಗುಲಕ್ಕೆ ಬಂದಿದ್ದಾನೆ. ಆದ್ರೆ ಇದಕ್ಕೂ ಮುನ್ನ ನಾಲ್ಕೈದು ವರ್ಷಗಳಿಂದ ಪ್ರೀತಿ ಮಾಡ್ತಿದ್ದ ಇನ್ನೊಂದು ಪ್ರಿಯತಮೆ ಇವರನ್ನು ನೋಡಿದ್ದಾಳೆ. ಅಲ್ಲದೆ ದೇವಸ್ಥಾನಕ್ಕೆ ಬಂದು ಗಲಾಟೆ ಮಾಡಿದ್ದಾಳೆ. ಇದರಿಂದ ಯುವಕ ಇಬ್ಬರು ಪ್ರೇಯಸಿಯರಿಗೂ ತಾಳಿ ಕಟ್ಟಿ ಮದುವೆಯಾಗಿದ್ದಾನೆ.








