ಭೀಕರ ಅಪಘಾತವೊಂದು ನಡೆದಿದ್ದು, ಪರಿಣಾಮ 10 ಜನ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾ(Odisha)ದಲ್ಲಿ ನಡೆದಿದೆ.
ಎರಡು ಬಸ್(Bus)ಗಳ ಮಧ್ಯೆ ಭಯಾನಕ ಡಿಕ್ಕಿ ಸಂಭವಿಸಿದ್ದರಿಂದಾಗಿ ಈ ಘಟನೆ ನಡೆದಿದೆ. ಅಲ್ಲಿಯ ಗಂಜಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 8 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಗಾಯಾಳುಗಳನ್ನು ಕೂಡಲೇ ಬರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಗಾಯಾಳುಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡಲಾಗುತ್ತಿದೆ ಎಂದು ಗಂಜಾಂ ಡಿಎಂ ದಿವ್ಯ ಜ್ಯೋತಿ ತಿಳಿಸಿದ್ದಾರೆ.








