ಶಿವಮೊಗ್ಗ: ಸಾಕಷ್ಟು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಕಾರು (Car) ಚಾಲಕನಿಗೆ ಶಿವಮೊಗ್ಗದ (Shivamogga) ಪಶ್ಚಿಮ ಸಂಚಾರ ಪೊಲೀಸರು (Traffic Police) ಮೂರು ಮೀಟರ್ ಉದ್ದದ ಬಿಲ್ ನೀಡಿ ಶಾಕ್ ನೀಡಿದೆ.
ಆನಂತರ ನಿಯಮ ಉಲ್ಲಂಘಿಸಿದ ವ್ಯಕ್ತಿಯಿಂದ ಬರೋಬ್ಬರಿ 11 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ. ಶಿವಪ್ಪನಾಯಕ ವೃತ್ತದ ಬಳಿ ವಾಹನ ತಪಾಸಣೆ ವೇಳೆ ಸಂಚಾರ ಪೊಲೀಸರು ಕಾರನ್ನು ತಡೆದು ಪರಿಶೀಲಿಸಿದ ವೇಳೆ ಆತ ಸಾಕಷ್ಟು ಬಾರಿ ನಿಯಮ ಉಲ್ಲಂಘಿಸಿರುವುದು ಗೊತ್ತಾಗಿದೆ.
ಆನಂತರ ಚಾಲಕನಿಗೆ ಅತಿ ದೊಡ್ಡ ಬಿಲ್ ನೀಡಲಾಗಿದೆ. ದಂಡ ಕಟ್ಟಿದ ನಂತರವೇ ಕಾರು ಚಾಲಕನನ್ನು ಬಿಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.