ಸರ್ಕಾರದ ವಿರುದ್ಧ ಗುಡುಗಿದ ಸಂಸದ Saaksha Tv
ಮೈಸೂರು: ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ, ಲಾಕ್ ಡೌನ್ ಅಂತ ಯಾಕೆ ಹೆದರಿಸುತ್ತಿದ್ದರಿ ಎಂದು ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು ವೀಕೆಂಡ್ ರಾಜ್ಯದ ಜನರ ಜೀವ ಉಳಿಸಲು ವ್ಯಾಕ್ಸಿನ್ ಕೊಟ್ಟಿದ್ದೇವೆ. ಜೀವದ ಜೊತೆಗೆ ಜೀವನವು ಮುಖ್ಯ. ಕರ್ಫ್ಯೂ, ಲಾಕ್ ಡೌನ್ ಅಂತ ಕಠಿಣ ನಿಯಮ ವಿಧಿಸಿದರೆ, ಜನರು ಜೀವನ ನಡೆಸುವುದು ಕಷ್ಟವಾಗುತ್ತದೆ. ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ ಪ್ರಚಾರ ರ್ಯಾಲಿ ನಡೆಯುತ್ತದೆ ತಾನೇ? ಹೀಗಿರುವಾಗ ಕರ್ನಾಟಕದಲ್ಲಿ ಯಾಕೆ ಕರ್ಫ್ಯೂ , ಲಾಕ್ ಡೌನ್ ಬೇಕು ಎಂದು ಗುಡುಗಿದರು.
ಜೀವನ ಉಳಿಯ ಬೇಕಾದರೆ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ ಡೌನ್ ತೆಗೆಯಿರಿ. ಸಾಮಜದ ಎಲ್ಲಾ ವರ್ಗದ ಜನರಿಗೆ ಈ ನಿಯಮಗಳಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಸಿಎಂ ಬೊಮ್ಮಾಯಿಯವರು ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.