ಯಾಮಿ ಗೌತಮಿ ಅಭಿನಯದ A Thursday ಚಿತ್ರದ ಟ್ರೈಲರ್ ಬಿಡುಗಡೆ..
ಯಾಮಿ ಗೌತಮಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ A Thursday ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ಕುತೂಹಲ ಸೃಷ್ಟಿಸಿದ್ದು ಹೊಸ ಭರವಸೆಯನ್ನ ಮೂಡಿಸಿದೆ.
ಬೆಹ್ಜಾದ್ ಖಂಬಾಟಾ ಎಂಬುವವರು ನಿರ್ದೇಶನ ಮಾಡಿದ್ದು, ನೇಹಾ ದೂಪಿಯಾ ಡಿಂಪಲ್ ಕಪಾಡಿಯಾ, ಅತುಲ್ ಕುಲಕರ್ಣಿ ಮತ್ತು ಕರ್ಣೀರ್ ಶರ್ಮಾ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ಯಾಮಿ ನೈನಾ ಜೈಸ್ವಾಲ್ ಪಾದಲ್ಲಿ ಕಾಣಿಸಿಕೊಂಡಿದ್ದು, ಮೊದಲ ಭಾರಿ ಕಿಡ್ನಾಪರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂಗನವಾಡಿ ಶಿಕ್ಷಕಿಯಾಗಿ 16 ಮಕ್ಕಳನ್ನ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದೇನೆ ಎಂದು ಪೊಲೀಸ್ ಠಾಣೆ ಗೆ ಪೋನ್ ಮಾಡಿ ತಿಳಿಸಿಸುವ ಮೂಲಕ ಟ್ರೈಲರ್ ಶುರುವಾಗುತ್ತದೆ.
ಚಿತ್ರದಲ್ಲಿ ನೇಹಾ ದೂಫಿಯಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಡಿಂಪಲ್ ಕಪಾಡಿಯ ಅವರನ್ನ ಪ್ರಧಾನಿಯಾಗಿ ತೊರಿಸಲಾಗಿದೆ. ಅತುಲ್ ಕುಲಕರ್ಣಿ ಸಹ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ.