ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಪಿಪಿಇ ಕಿಟ್ ಧರಿಸಿ ಆಹಾರ ಬಡಿಸುವ ಮಾಣಿಗಳ ವೀಡಿಯೊ
ಮುದಿನೆಪಲ್ಲಿ, ಜುಲೈ 25: ಆಂಧ್ರಪ್ರದೇಶದಲ್ಲಿ ಪಿಪಿಇ ಕಿಟ್ ಧರಿಸಿ ಮಾಣಿಗಳು ವಿವಾಹ ಸಮಾರಂಭದಲ್ಲಿ ಆಹಾರ ಬಡಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜುಲೈ 22 ರಂದು ಆಂಧ್ರಪ್ರದೇಶದ ಮುದಿನೆಪಲ್ಲಿ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭದ ವಿಡಿಯೋ ಅದಾಗಿದೆ
ಕೃಷ್ಣ ಜಿಲ್ಲೆಯ ಗುಡಿವಾಡದ ಕೋಟಿ ಕ್ಯಾಟರರ್ಸ್ 3 ತಿಂಗಳ ನಂತರ ಮದುವೆಯ ಸಮಾರಂಭಕ್ಕೆ ಆಹಾರ ತಯಾರಿಸುವ ಗುತ್ತಿಗೆ ಪಡೆದಿದ್ದರು. ವಿವಾಹಕ್ಕಾಗಿ ಸುಮಾರು 150-200 ಪ್ಲೇಟ್ಗಳ ವ್ಯವಸ್ಥೆ ಮಾಡಲು ಅವರನ್ನು ಕೇಳಲಾಗಿತ್ತು.
ವಿವಾಹದ ಆಯೋಜಕರು, ಕೋವಿಡ್ -19 ಪ್ರೋಟೋಕಾಲ್ಗಳನ್ನು ಗಮನದಲ್ಲಿಟ್ಟುಕೊಂಡು, ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಂಡು ಎಲ್ಲಾ ಮಾಣಿಗಳು ಮತ್ತು ತಂಡದ ಸದಸ್ಯರು ಕಡ್ಡಾಯವಾಗಿ ಪಿಪಿಇ ಕಿಟ್ಗಳನ್ನು ಧರಿಸಿರಬೇಕು ಎಂದು ಕ್ಯಾಟರರ್ ಗಳನ್ನು ಕೇಳಿದ್ದರು. ಅಷ್ಟೇ ಅಲ್ಲ ಮದುವೆ ಸಮಾರಂಭದಲ್ಲಿ ತಾಪಮಾನವನ್ನು ಸಹ ಪರಿಶೀಲಿಸಲಾಗಿತ್ತು ಮತ್ತು ಸ್ಯಾನಿಟೈಸರ್ ಗಳನ್ನು ಸಹ ಬಳಸಲಾಗಿತ್ತು. ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಪಿಪಿಇ ಕಿಟ್ ಧರಿಸಿದ 12 ಮಾಣಿಗಳು ಭೋಜನ ಬಡಿಸಿದರು. ವಿವಾಹ ಮುಗಿದ ನಂತರ, ಕಿಟ್ಗಳನ್ನು ಸಹ ಸರಿಯಾಗಿ ವಿಲೇವಾರಿ ಮಾಡಲಾಯಿತು.
ಆಂಧ್ರಪ್ರದೇಶದಲ್ಲಿ ಕೊರೋನವೈರಸ್ ಪ್ರಕರಣಗಳು ತೀವ್ರ ಏರಿಕೆ ಕಂಡಿವೆ ಮತ್ತು ದೇಶದ ಅತಿ ಹೆಚ್ಚು ಕೊರೊನಾ ಸೋಂಕಿತ ಮೊದಲ ಐದು ರಾಜ್ಯಗಳ ಪಟ್ಟಿಗೆ ಪ್ರವೇಶಿಸಿದೆ. ಮದುವೆ ಪ್ರತಿಷ್ಠಾನಕ್ಕೆ ಅನುಮತಿ ನೀಡಲು ತಹಶೀಲ್ದಾರ್ಗೆ ರಾಜ್ಯ ಸರ್ಕಾರ ಅಧಿಕಾರ ನೀಡಿದೆ ಮತ್ತು ಅನುಮೋದನೆ ಇಲ್ಲದೆ, ರಾಜ್ಯದಲ್ಲಿ ಯಾವುದೇ ಕಾರ್ಯವನ್ನು ನಡೆಸುವಂತಿಲ್ಲ ಎಂದು ಆದೇಶಿಸಿದೆ.
‘ಶ್ರಾವಣ ಮಾಸ’ ಪ್ರಾರಂಭವಾಗುವುದರೊಂದಿಗೆ ರಾಜ್ಯವು ಅನೇಕ ವಿವಾಹಗಳಿಗೆ ಸಾಕ್ಷಿಯಾಗಿದೆ. ಸಮಾರಂಭದ ತ್ವರಿತ ಅನುಮೋದನೆಗಾಗಿ ಸರ್ಕಾರವು ಅನುಮತಿಗಳನ್ನು ನೀಡಲು ತಹಶೀಲ್ದಾರ್ಗೆ ಈಗ ಅಧಿಕಾರ ನೀಡಿದೆ.