ಕಾರವಾರ: ಜಿಲ್ಲೆಯ ಗೋಕರ್ಣದಲ್ಲಿ ಪ್ರವಾಸಕ್ಕೆ (Tour) ಬಂದಿದ್ದ ಜಪಾನ್(Japan) ಮೂಲದ ಮಹಿಳೆಯೊಬ್ಬರು(Woman) ನಾಪತ್ತೆಯಾಗಿರುವ ಘಟನೆ ನಡೆದಿದೆ.
ಜಪಾನ್ ಮೂಲದ ಎಮಿ ಯಮಾಝಕಿ (40) ನಾಪತ್ತೆಯಾದ ಮಹಿಳೆ. ಇವರು ತಮ್ಮ ಪತಿಯೊಂದಿಗೆ ಫೆ. 5ರಂದು ಜಪಾನ್ ಗೆ ಬಂದಿದ್ದರು. ಈ ವೇಳೆ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕ್ಯಾಂಪಸ್ ನಲ್ಲಿ ಉಳಿದುಕೊಂಡಿದ್ದರು. ಆದರೆ, ಮಾರನೇ ದಿನ ಬೆಳಿಗ್ಗೆ ಕ್ಯಾಂಪಸ್ ನಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆಂದು ಅವರ ಪತಿ ದೈ ಯಮಾಝಕಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.