ತನ್ನ ಪತಿಯ ಪಾಸ್‌ಪೋರ್ಟ್ ನಲ್ಲಿ ಪ್ರೇಮಿಯ ಜತೆ ಆಸ್ಟ್ರೇಲಿಯಾ ತೆರಳಿದ ಉತ್ತರ ಪ್ರದೇಶದ ಮಹಿಳೆ
ಉತ್ತರ ಪ್ರದೇಶ, ಅಗಸ್ಟ್ 30: 36 ವರ್ಷದ ಮಹಿಳೆ ತನ್ನ ಪತಿಯ ಪಾಸ್‌ಪೋರ್ಟ್ ನಲ್ಲಿ ತನ್ನ ಪ್ರೇಮಿಯ ಜೊತೆ ಜನವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ವರದಿಯಾಗಿದೆ.
ಮಾರ್ಚ್ ನಲ್ಲಿ ಮರಳಲು ಇಬ್ಬರೂ ಯೋಜಿಸಿದ್ದರು, ಆದರೆ ಕೊರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಕ್ರಮವಾಗಿ ಸರ್ಕಾರವು ಅಂತರರಾಷ್ಟ್ರೀಯ ಪ್ರಯಾಣಿಕರ ಹಾರಾಟದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರಿಂದ ಅವರು ಅಲ್ಲಿಯೇ ನೆಲೆಸಿರಬೇಕಾಯಿತು ಮತ್ತು ಆಗಸ್ಟ್ 24 ರಂದು ಮನೆಗೆ ಮರಳಲು ಸಾಧ್ಯವಾಯಿತು.
ಅವರು ಮನೆಗೆ ಮರಳಿದಾಗ , ಕಳೆದ 20 ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಅವಳ 46 ವರ್ಷದ ಪತಿ, ಸ್ಥಳೀಯ ನಿವಾಸಿ 36 ವರ್ಷದ ಸಂದೀಪ್ ಸಿಂಗ್ ಜತೆ ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ, ಆಕೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು ಮತ್ತು ನಕಲಿ ದಾಖಲೆಗಳನ್ನು ಬಳಸಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಪತ್ನಿ ಪಿಲಿಭಿತ್‌ನಲ್ಲಿ ವಾಸಿಸುತ್ತಿದ್ದು ಪೂರ್ವಜರ ಆಸ್ತಿಯನ್ನು ನೋಡಿಕೊಳ್ಳುತ್ತಾಳೆ ಎಂದು ದೂರಿನಲ್ಲಿ ತಿಳಿಸಿದ್ದು, ತಾನು ಸಾಂದರ್ಭಿಕವಾಗಿ ಪತ್ನಿಯನ್ನು ಭೇಟಿಯಾಗುತ್ತಿದ್ದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಾನು ಮೇ 18 ರಂದು ಪಿಲಿಭಿತ್ ಗೆ ಹಿಂದಿರುಗಿದಾಗ, ನನ್ನ ಪತ್ನಿ ಮನೆಯಲ್ಲಿ ಇರಲಿಲ್ಲ, ಇಬ್ಬರೂ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ ಎಂದು ಸಂದೀಪ್ ಅವರ ಕುಟುಂಬದಿಂದ ನನಗೆ ತಿಳಿಯಿತು ಎಂದು ತಿಳಿದ ನಂತರ, ಆ ವ್ಯಕ್ತಿ ತನ್ನ ಅನುಮಾನವನ್ನು ದೃಢೀಕರಿಸಲು ಉದ್ದೇಶಪೂರ್ವಕವಾಗಿ ಬರೇಲಿಯ ಪಾಸ್ಪೋರ್ಟ್ ಕಚೇರಿಯಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದರು. ಆಗ ಅವರ ಹೆಸರಿನಲ್ಲಿ ಪಾಸ್‌ಪೋರ್ಟ್ ಈಗಾಗಲೇ ಅಸ್ತಿತ್ವದಲ್ಲಿದೆ ಮತ್ತು ಅದನ್ನು ಫೆಬ್ರವರಿ 2, 2019 ರಂದು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದು, ನಕಲಿ ದಾಖಲೆ ಸೃಷ್ಟಿಸಿ ಅಂತಾರಾಷ್ಟ್ರೀಯ ಪ್ರಯಾಣ ಮಾಡಿರುವುದು ಗಂಭೀರ ವಿಷಯವಾಗಿದೆ ಎಂದು ಆಕೆಯ ಪತಿ ಹೇಳಿದ್ದಾರೆ.








