ಪ್ಯೊಂಗ್ಯಾಂಗ್, ಮೇ 25 : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಇತ್ತೀಚೆಗಷ್ಟೇ ಭಾರಿ ಸುದ್ದಿಯಾಗಿದ್ದರು. ಕಿಮ್ ಜೊಂಗ್ ಉನ್ ಸತ್ತು ಹೋಗಿದ್ದಾರೆ ಎಂದು ಸಾಲು ಸಾಲು ವದಂತಿಗಳು ಹರಡಿ ಇಡೀ ವಿಶ್ವದ ಗಮನ ಸೆಳೆದಿದ್ದವು. ಕೊನೆಗೆ ಅದೃಶ್ಯರಾಗಿದ್ದ ಕಿಮ್ ಜೊಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡು ಸಾವಿನ ವದಂತಿಗಳಿಗೆ ತೆರೆ ಎಳೆದಿದ್ದರು.ಇದೀಗ ಉತ್ತರ ಕೊರಿಯಾದ ಸರ್ವಾಧಿಕಾರಿ ಮಾಡಿರುವ ದಯೆಗೆ ಸಂಬಂಧ ಪಟ್ಟ ಟ್ವೀಟ್ ಒಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಿಮ್ ಜೊಂಗ್ ಉನ್, ನೀವು ಹೇಗೆ ಇರಿ, ದಯೆ ಎಂಬುವುದು ನಿಮ್ಮನ್ನು ಅತ್ಯಂತ ಸುಂದರ ವ್ಯಕ್ತಿಯನ್ನಾಗಿಸುತ್ತದೆ ಎಂದು ಟ್ವೀಟ್ ಮಾಡಿ, ಭಾರತದ ಬಡ ಮಹಿಳೆ ಸಂತೋಷದಿಂದ ನಗುತ್ತಿರುವ ಮಗುವನ್ನು ಎತ್ತಿಕೊಂಡು, ಆ ಮಗುವಿನ ನಗು ನೋಡಿ ತಾನು ಸಂತೋಷ ಪಡುತ್ತಿರುವ ಪೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದರ ಕೆಳಗೆ ಮಕ್ಕಳಿಗೆ ಸಂಪತ್ತು ಮತ್ತು ಹಣ ಅರ್ಥವಾಗುವುದಿಲ್ಲ. ಮಕ್ಕಳು ತಾಯಿಯ ತೋಳಲ್ಲಿ ಸದಾ ಸುರಕ್ಷಿತ ಮತ್ತು ಆನಂದವಾಗಿ ಇರುತ್ತಾರೆ ಎಂದು ಬರೆದು ಕೊಂಡಿದ್ದಾರೆ. ಕಿಮ್ ಜೊಂಗ್ ಉನ್ ಟ್ವೀಟ್ ಗೆ ನೆಟ್ಟಿಗರು ಉತ್ತರ ಕೊರಿಯಾದ ಸರ್ವಾಧಿಕಾರಿ, ಜಗತ್ತನ್ನೆ ಆತಂಕಕ್ಕೆ ದೂಡಿದ ಹುಚ್ಚು ದೊರೆಯ ಬಾಯಲ್ಲಿ ದಯೆಯ ಮಾತುಗಳೇ ಎಂದು ವ್ಯಂಗ್ಯ ಮಾಡಿದ್ದಾರೆ. ದಯೆ, ಕರುಣೆ, ಮಮತೆಯ ಸಂದೇಶ ಸಾರುತ್ತಿರುವ ಸರ್ವಾಕಾರಿಯ ಟ್ವೀಟ್ ಗಳು ಇದೀಗ ಜನರಲ್ಲಿ ನಿಗೂಢತೆಯನ್ನು ಹುಟ್ಟು ಹಾಕಿದೆ.








