ಬೆಂಗಳೂರು ಸೇರದಂತೆ ಕರ್ನಾಟಕದ ಹಲವು ಜಿಲ್ಲೆಗಳು ಈಘಾಗಲೆ ಮಳೆಗೆ ತತ್ತರಿಸಿವೆ, ಇಂದು ಚಂಡಮಾರುತದಿಂದ ಸುಧಾರಿಸಿಕೊಳ್ಳುವ ಮೊದಲೆ ಇನ್ನೊಂದು ಚಂಡಮಾರುತ ಕರ್ನಾಟಕಕ್ಕೆ ಕಾಲಿಟ್ಟಿದೆ.
ಶ್ರೀಲಂಕಾ ಭಾಗದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ ಈ ಹಿನ್ನಲೆಯಲ್ಲಿ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಳೆದ ಹದಿನೈದು ದಿನಗಳಿಂದ ಬಂಗಾಳಕೊಲ್ಲಿಯಲ್ಲಿ ವಾಯು ಬಾರ ಕುಸಿತದಿದಾಗಿ ಭಾರಿ ಮಳೆ ಸುರಿದಿದ್ದರಿಂದ ಕೆರ ಕೊಳ್ಳ ತುಂಬಿ ಹರಿದಿದ್ದು, ಈಗ ಮತ್ತೆ ಮಳೆಯಾಗುವುದರಿಂದ ಸಾಕಷ್ಟು ಹಾನಿಯುಂಟಾಗುವ ಸಾಧ್ಯತೆ ಇದೆ.
ಹಾಗಾಗಿ ತುಮಕೂರು ರಾಮನಗರ ಮೈಸೂರು ಮಂಡ್ಯ ಕೊಡಗು ಜಿಲ್ಲೆಗಳಲ್ಲಿ 28 ನೇ ತಾರೀಖಿನಿಂದ ಭಾರಿ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಈ ಜಿಲ್ಲೆಗಳಲ್ಲಿ ಕಟ್ಟೆಚ್ಚರವಹಿಸಲಿದೆ.








