ನಿದ್ದೆ ಮಾಡಲು ಕಣ್ಣು ಮುಚ್ಚಿದವ, ಕಣ್ಣು ತೆರೆಯಲಿಲ್ಲ
ರಾಯಚೂರು: ಮರಳು ಸಾಗಾಣೆ ಮಾಡುವ ಟಿಪ್ಪರ ಹರಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ.
ಮಾರುತಿ (190 ಮೃತ ದುರ್ದೈವಿ. ಬೇಸಿಗೆ ದಗೆ ಹಿನ್ನಲೆಯಲ್ಲಿ ಮನೆ ಮುಂದೆ ಮಲಗಿದ್ದ ಮಾರುತಿ ಮೇಲೆ ಮರಳು ತುಂಬಿದ ಲಾರಿ ಹರಿದಿದೆ. ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
ಮಾರುತಿಯ ಕುಟುಂಬ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬವಾಗಿದೆ. ಈ ಕುಟುಂಬ ಹೊಲದಲ್ಲಿ ಮೆನೆ ಮಾಡಿಕೊಂಡಿತ್ತು. ಇವರ ಮನೆ ಎದುರೇಏ ಮರಳು ಸಂಗ್ರಹಣೆ ಅಡ್ಡಾ ಇದ್ದು,ಹಗಲು ರಾತ್ರಿ ಮರಳು ಸಾಗಣೆ ನಡೆಯುತ್ತದೆ. ಬೇಸಗೆ ಕಾಲವಾದ್ದರಿಂದ ನಿನ್ನೆ ರಾತ್ರಿ ಮಾರುತಿ ಮನೆಯ ಹೊರಗಡೆ ಮಲಗಿದ್ದಾನೆ.
ಈ ವೇಳೆ ಲೋಡ್ ಆದ ಟಿಪ್ಪರ್ ಮಾರುತಿ ಮೇಲೆ ಹರಿದಿದೆ. ಪರಿಣಾಮ ಮಾರುತಿ ಸಾವನ್ನಪ್ಪಿದ್ದಾನೆ. ಮನೆ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನೂ ಮಂಜುನಾಥ್ ಹಾಗೂ ಹನುಮಂತ್ ಎನ್ನುವವರು ಅಕ್ರಮವಾಗಿ ಮರಳು ಸಂಗ್ರಹ ಮಾಡುತ್ತಿರುವ ಆರೋಪ ಕೇಳಿಬಂದಿದೆ.