ರೈಲಿನಲ್ಲಿ ಧೂಮಪಾನ ಮತ್ತು ಮಧ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಕೂಡ ಓರ್ವ ಯುವತಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಓರ್ವ ಯುವತಿ ಸಿಗರೇಟ್ ಸೇದುತ್ತಿರುವ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ . ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ @Mahtoji_007 ಎಂಬುವರು ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿ ಎಸಿ ಕೋಚ್‌ನಲ್ಲಿ ಯುವತಿ ಮತ್ತು ಸಹ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ.
क्या हो गया है एक तो लड़की है ऊपर से चलती ट्रेन में सिगरेट पी रही है। कितना नीचे गिर रही ये लड़की लोग।@RailMinIndia @RailwaySevapic.twitter.com/dxTZlisXlr
— Prabhat Mahto (@Mahtoji_007) September 15, 2025
ವಿಡಿಯೋದಲ್ಲಿ ಯುವತಿ ಕುಳಿತು ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬರುತ್ತದೆ. ಅವಳ ಒಂದು ಕೈಯಲ್ಲಿ ಫೋನ್ ಮತ್ತು ಇನ್ನೊಂದು ಕೈಯಲ್ಲಿ ಸಿಗರೇಟನ್ನು ಹಿಡಿದಿದ್ದಾಳೆ. ಈ ಬಗ್ಗೆ ಅವಳು ಕೆಲವು ಜನರೊಂದಿಗೆ ಜಗಳವಾಡುತ್ತಿದ್ದಾಳೆ. ಹೆಚ್ಚಿನವರು, ಆಕೆಗೆ ರೈಲಿನ ಬೋಗಿಯಿಂದ ಹೊರಹೋಗಿ ಸಿಗರೇಟ್ ಸೇದುವಂತೆ ಹೇಳಿದ್ದಾರೆ.







