ದಾವಣಗೆರೆ: ಮನೆಯವರು ಬೈಕ್ ಕೊಡಿಸಿಲ್ಲ ಎಂಬ ಕಾರಣಕ್ಕೆ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ. ವಿಕಾಸ್.ಆರ್ (20) ಬೈಕ್ ಕೇಳಿದ್ದರೂ ಅಪ್ಪ ಕೊಡಿಸಲಿಲ್ಲ ಎಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡಿದ್ದ ವಿಕಾಸ್ ಹಲವಾರು ಬಾರಿ ಕುಟುಂಬಸ್ಥರನ್ನು ಬೈಕ್ ಕೊಡಿಸುವಂತೆ ಕೇಳಿದ್ದಾನೆ. ಆದರೆ, ಆರ್ಥಿಕ (Money) ತೊಂದರೆಯಿಂದಾಗಿ ಬೈಕ್ ಕೊಡಿಸಿರಲಿಲ್ಲ. ಇದರಿಂದಾಗಿ ಕುಟುಂಬಸ್ಥರೊಂದಿಗೆ ಹಲವು ಬಾರಿ ಜಗಳವಾಡಿದ್ದಾನೆ. ಸರಿಯಾಗಿ ಯಾರೊಂದಿಗೂ ಮಾತನಾಡದೆ, ಊಟ ಕೂಡ ಬಿಟ್ಟದ್ದ ಎನ್ನಲಾಗಿದೆ. ಆನಂತರ ಸಂಬಂಧಿಕರೊಬ್ಬರ ಮನೆಯಲ್ಲಿ ಇದ್ದ. ಈ ವೇಳೆ ವಿಷ ಸೇವಿಸಿದ್ದಾನೆ ಎನ್ನಲಾಗಿದೆ. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.