ಚಲಿಸುತ್ತಿದ್ದ ರೈಲಿನಲ್ಲಿ ಕಳ್ಳನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಚಿನ್ನ ಸರ ಎಗರಿಸಿ ಪರಾರಿಯಾಗಿರುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ.
ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಚೆನ್ನೈನ ತಿರುಮುಲ್ಲೈವಾಯಲ್ ಪ್ರದೇಶದ ವಲಮರ್ತಿ(43) ಎಂದು ಗುರುತಿಸಲಾಗಿರುವ ಮಹಿಳಾ ಪ್ರಯಾಣಿಕರಿಂದ ಚಿನ್ನದ ಸರ ಕಿತ್ತುಕೊಂಡು ಕಳ್ಳ ಚಲಿಸುವ ರೈಲಿನಿಂದ ಫ್ಲಾಟ್ ಫಾರ್ಮ್ ಮೇಲೆ ಜಿಗಿದು ಓಡಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿತರುವ ವಲರ್ಮತಿ ಅವರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಹಿಳೆಯು ಚೆನ್ನೈನ ಸೆಂಟ್ರಲ್ ನಿಂದ ತಿರುವಳ್ಳೂರು ಕಡೆಗೆ ಎಲೆಕ್ಟ್ರಿಕ್ ರೈಲು ಹತ್ತಿ ಹೊರಟಿದ್ದರು.
ಆದರೆ, ರೈಲು ಹೊರಟು ನಿಂತಾಗ ಹಿಂಬದಿಯಲ್ಲಿದ್ದ ಯುವಕ ಮಹಿಳೆಯ ಸರ ಕಿತ್ತುಕೊಂಡು ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ. ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಬೇಸಿಸ್ ಬ್ರಿಡ್ಜ್ ರೈಲ್ವೆ ಪೊಲೀಸರು ವಿಶೇಷ ತನಿಖೆ ತಂಡ ರಚಿಸಿ ಹುಡುಕಾಟ ನಡೆಸಿದ್ದಾರೆ.








