ಬೆಂಗಳೂರು: ಬೆಂಗಳೂರಿನ (Bengaluru) ಬಗ್ಗೆ ಯುವತಿಯೊಬ್ಬರು ನಾಲಿಗೆ ಹರಿಬಿಟ್ಟಿರುವ ಘಟನೆ ನಡೆದಿದೆ.
ಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ ಎಂದು ಅನ್ಯ ರಾಜ್ಯದ ಯುವತಿಯೊಬ್ಬಳು ನಾಲಿಗೆ ಹರಿಬಿಟ್ಟಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಉತ್ತರ ಭಾರತೀಯ ಮೂಲದ ಯುವತಿ ಈ ರೀತಿ ಹೇಳಿಕೆ ನೀಡಿದ್ದು, ಕನ್ನಡಿಗರು ಕೆರಳುವಂತೆ ಮಾಡಿದೆ. ನಿನ್ನೆಯಷ್ಟೇ ಓಲಾ ಆಟೋ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿಯ ನಡುವೆ ವಾಗ್ವಾದ ನಡೆದಿತ್ತು. ಆಟೋ ಚಾಲಕನ ವಿರುದ್ಧ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೂಡ ಕೇಳಿ ಬಂದಿತ್ತು. ಅಲ್ಲದೇ, ಪೊಲೀಸರು ಕೂಡ ಆಟೋ ಚಾಲಕನನ್ನು ಬಂಧಿಸಿ, ಕ್ರಮ ಕೈಗೊಂಡಿದ್ದಾರೆ.
It’s highly derogatory remarks about Karnataka and its people. She is calling Kannadigas fuckers and says Bengaluru’s development is because of North Indians and insult the local population. Why can’t they stay in their hometown and develop their own economy?#Bengaluru… pic.twitter.com/YGl4sGMk6e
— Enigma (@EnigmaticReddy) September 6, 2024
ಘಟನೆಯನ್ನ ಖಂಡಿಸುವ ಭರದಲ್ಲಿ ಬೆಂಗಳೂರನ ಸ್ಥಳೀಯರ ವಿರುದ್ಧ ಅವಾಚ್ಯ ಶಬ್ದ ಬಳಸಿ ಯುವತಿ ಮಾತನಾಡಿದ್ದಾಳೆ. ‘ಬೇರೆ ಕಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ನಮ್ಮಂಥವರಿಂದಲೇ ಇಡೀ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ. ನಾವೆಲ್ಲಾ ತೆರಿಗೆ ಕಟ್ಟುತ್ತಿದ್ದೇವೆ. ಇವರಿಗೆ ನಾವು ಬಾಡಿಗೆ ಕಟ್ಟುತ್ತಿದ್ದೇವೆ. ಇಡೀ ಬೆಂಗಳೂರಿನ ಆರ್ಥಿಕತೆ ನಡೆಯುತ್ತಿರುವುದೇ ನಮ್ಮಿಂದ ಎಂದು ಹೇಳಿದ್ದಾಳೆ.
ಕರ್ಮ ಇವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಯುವತಿ ನಿಂದಿಸಿದ್ದಾಳೆ. ಈಗ ಯುವತಿಯ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.








