ಲವ್ ಜಿಹಾದ್ ಬಗ್ಗೆ ಪ್ರಚೋದನಾಕಾರಿ ಪೋಸ್ಟ್ ಯುವಕ
ಹುಬ್ಬಳ್ಳಿ: ಲವ್ ಜಿಹಾದ್ ಬಗ್ಗೆ ಸಾಮಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ತಣ್ಣಗಾಗುವ ಮೊದಲೇ ಕೇಶ್ವಾಪುರದ ಪವನ್ ಈ ಪೋಸ್ಟ್ ಹಾಕಿದ್ದಾನೆ. ಸಧ್ಯ ಪವನ್ ನನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯು ಬೆಂಡಿಗೇರಿ ಯುವಕ ಹಾಗೂ ಆನಂದನಗರದ ಯುವತಿಯ ಕುರಿತು ಕೋಮು ಭಾವನೆ ಕೆರಳಿಸುವ ಸಂದೇಶವನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ. ತಪ್ಪು ಕಲ್ಪನೆಯಿಂದ ಅನ್ಯ ಕೋಮಿನ ಯುವಕ-ಯುವತಿ ಕುರಿತು ಈತ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬೆಂಡಿಗೇರಿ ಠಾಣೆ ವ್ಯಾಪ್ತಿಯ ಯುವಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.