“ಆಧಾರ್ ಪೌರತ್ವದ ದಾಖಲೆಯಲ್ಲ ಮತ್ತು ಆಧಾರ್ ಗೆ ಅರ್ಜಿ ಸಲ್ಲಿಸುವ ಮೊದಲು 182 ದಿನಗಳ ಕಾಲ ಭಾರತದಲ್ಲಿ ವ್ಯಕ್ತಿಯ ವಾಸಸ್ಥಳವನ್ನು ಖಚಿತಪಡಿಸಿಕೊಳ್ಳುವುದು ಆಧಾರ್ ಕಾಯ್ದೆಯಡಿ ಕಡ್ಡಾಯಗೊಳಿಸಲಾಗಿದೆ ಎಂದು ಯುಐಡಿಎಐ ಟ್ವೀಟ್ ಮಾಡಿದೆ.
ಭಾರತದ ಸುಪ್ರೀಂ ಕೋರ್ಟ್ ಅಕ್ರಮ ವಲಸಿಗರಿಗೆ ಆಧಾರ್ ನೀಡದಂತೆ ಯುಐಡಿಎಐಗೆ ನಿರ್ದೇಶನ ನೀಡಿದೆ ಎಂದು ಅದು ಉಲ್ಲೇಖಿಸಿದೆ.
ಸುಳ್ಳು ದಾಖಲೆಗಳನ್ನು ಸಲ್ಲಿಸುವ ಮೂಲಕ ಅಥವಾ ಸುಳ್ಳು ನೆಪಗಳ ಮೂಲಕ ಆಧಾರ್ ಪಡೆದಿರುವುದು ಸಾಬೀತಾದರೆ, ಅವರ ಆಧಾರ್ ರದ್ದುಗೊಳಿಸಲಾಗುವುದು ಅಥವಾ ಅಮಾನತುಗೊಳಿಸಲಾಗುವುದು. ಆಧಾರ್ ಸಂಖ್ಯೆಯನ್ನು ರದ್ದುಪಡಿಸುವುದು ಯಾವುದೇ ನಿವಾಸಿಗಳ ರಾಷ್ಟ್ರೀಯತೆಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ. ಇದು ಗುಣಮಟ್ಟದ ಸುಧಾರಣಾ ಪ್ರಕ್ರಿಯೆಯಾಗಿದ್ದು, ಯುಐಡಿಎಐ ನಿಯಮಿತವಾಗಿ ತೆಗೆದುಕೊಳ್ಳುತ್ತದೆ, ಎಂದು ಅದು ಪುನರುಚ್ಚರಿಸಿದೆ.